ರಸ್ತೆಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಗುದ್ದಿದ ಲಾರಿ: ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವು

ಕುಮಟಾ: ರಸ್ತೆ ಪಕ್ಕದಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಲಾರಿ ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿದ ಘಟನೆ ಮಿರ್ಜಾನಿನ ಹೆದ್ದಾರಿ ಸಮೀಪ ನಡೆದಿದೆ. ಅತಿವೇಗ ಮತ್ತು ನಿಷ್ಕಾಳಜಿಯಿಂದ ಲಾರಿ ಚಲಾಯಿಸಿಕೊಂಡು ಬಂದ ಲಾರಿ ಚಾಲಕ, ಅಚಾನಕ್ ಆಗಿ ಅಡ್ಡಬಂದ ದನವನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ.

ಲಾರಿ ಗುದ್ದಿದ ರಭಸಕ್ಕೆ ಮಹಿಳೆ ಮಹಿಳೆ ಹೆದ್ದಾರಿಯಲ್ಲಿ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಅಂಕೋಲಾದಿoದ ಕುಮಟಾ ಕಡೆಗೆ ಅತಿವೇಗ, ನಿಷ್ಕಾಳಜಿ ಚಾಲನೆ ಮಾಡಿಕೊಂಡು ಬಂದ ಲಾರಿ ಚಾಲಕನ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091

Exit mobile version