ಶಾಲೆಗೆ ಬರುತ್ತಿದ್ದ 20ಕ್ಕೂ ಹೆಚ್ಚು ಮಕ್ಕಳಿಗೆ ಜೇನು ಕಡಿತ: 16 ಮಕ್ಕಳಿಗೆ ಗಂಭೀರ ಗಾಯ

ಕಾರವಾರ: ಶಾಲೆಗೆ ಬರುತ್ತಿದ್ದ 20ಕ್ಕೂ ಹೆಚ್ಚು ಮಕ್ಕಳಿಗೆ ಜೇನು ಕಡಿದ ತಾಲೂಕಿನ ಕಿನ್ನರ ಗ್ರಾಮದ ನ್ಯೂ ಹೈಸ್ಕೂಲ್ ನಲ್ಲಿ ನಡೆದಿದೆ. ಜೇನು ಕಡಿತದಿಂದ ಶಾಲೆಗೆ ಬರುತ್ತಿದ್ದ 16ಕ್ಕೂ ಹೆಚ್ಚು ಮಕ್ಕಳು ಗಂಭೀರ ಗಾಯಗೊಂಡಿದ್ದು, ಅಸ್ವಸ್ಥರಾಗಿದ್ದಾರೆ. ಎಲ್ಲಾ ಗಾಯಾಳು ಮಕ್ಕಳನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಲೆಯ ಪಕ್ಕದಲ್ಲೇ ಇರುವ ತೆಂಗಿನಮರದಲ್ಲಿ ಜೇನು ಗೂಡುಕೊಟ್ಟಿಕೊಂಡಿತ್ತು. ಇಂದು ಶಾಲೆಗೆ ಬರುತ್ತಿದ್ದ ವೇಳೆ ಮಕ್ಕಳಿಗೆ ಕಡಿದಿದೆ. ತಕ್ಷಣ ಮಕ್ಕಳನ್ನು ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತಿಚೆಗೆ ಅಂಕೋಲದಲ್ಲಿ ಅರಣ್ಯಾಧಿಕಾರಿಯೊಬ್ಬರಿಗೆ ಜೇನುಕಡಿದಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ವಿಷಯ ತಿಳಿದ ಶಾಸಕಿ ರೂಪಾಲಿ ನಾಯ್ಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಜೇನು ಕಚ್ಚಿ ಹೆಚ್ಚಿನ ಹಾನಿ ಮಾಡಿದೆ. ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಿದ್ದೇನೆ ಅಲ್ಲದೆ, ಶಾಲಾ ಆವರಣದಲ್ಲಿ ಇರುವ ಜೇನಗೂಡನ್ನು ತೆರವುಗೊಳಿಸಲು ಸೂಚಿಸಲಾಗಿದೆ ಎಂದರು.

ವಿಸ್ಮಯ ನ್ಯೂಸ್, ಕಾರವಾರ

Exit mobile version