ರಸ್ತೆ ದಾಟುತ್ತಿದ್ದಾಗ ಡಿಕ್ಕಿ ಹೊಡೆದ ಕಾರು: ಪಾದಚಾರಿ ಮೇಲೆ ಹರಿದ ಟ್ಯಾಂಕರ್: ಸ್ಥಳದಲ್ಲೇ ಸಾವು

ಹೊನ್ನಾವರ : ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪಿದ ಘಟನೆ ಹಳದೀಪುರದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ಅಗ್ರಹಾರ ಸಮೀಪದ ಮೀನುಪೇಟೆ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಕೆಲಸ ಮುಗಿಸಿ ವಾಪಸ್ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ವೇಳೆ ಸಂತೋಷ ಕೃಷ್ಣ ಖಾರ್ವಿ ಮೃತಪಟ್ಟಿದ್ದಾನೆ. ಡಿಕ್ಕಿಯ ರಭಸಕ್ಕೆ ಡಿವೈಡರ್ ದಾಟಿ ಪಕ್ಕದ ರಸ್ತೆಯಲ್ಲಿ ಬಿದ್ದು ಆತನ ಮೇಲೆ ಟ್ಯಾಂಕರ್ ಚಲಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ದೇಹ ರಸ್ತೆಯಲ್ಲಿಯೇ ಛಿದ್ರ ಛಿದ್ರವಾಗಿದೆ. ಐಆರ್‌ಬಿಯ ಅವೈಜ್ಞಾನಿಕ ಕಾಮಗಾರಿಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091

Exit mobile version