ಜೋಯ್ಡಾ: ಗಡಿ ತಾಲೂಕಾದ ಜೊಯಿಡಾ ತಾಲೂಕಾ ಕನ್ನಡ ಭವನ ಇಂದು ನಿರ್ವಹಣೆ ಇಲ್ಲದೆ ಇಂದು ಪಾಳು ಬಿದ್ದ ಕೊಂಪೆಯoತಾಗಿದೆ. ಕಟ್ಟಡದ ಒಡೆದ ಕಿಟಕಿ ಬಾಗಿಲುಗಳು, ಒಳಗೆ ಬಾವಲಿಗಳ ಹಿಕ್ಕೆ, ಕಟ್ಟದ ಮುಂಬಾಗ ಸರಾಯಿ ಬಾಟಲಿಗಳ ರಾಶಿಯಿಂದ ತುಂಬಿ ಕಂಗೋಳಿಸುತ್ತಿದೆ. ಜೊಯಿಡಾ ಕನ್ನಡ ಭವನಕ್ಕಾಗಿ 2006 ರಲ್ಲಿ ವಿಧಾನ ಪರಿಷತ್ ಸದಸ್ಯರಾದ ಮುಖ್ಯಮಂತ್ರಿ ಚಂದ್ರು ಅವರ ಪ್ರವೇಶಾಭಿವೃದ್ದಿ ಅನುದಾನದಲ್ಲಿ ಮಂಜೂರಿಯಾಗಿದ್ದು, ನಂತರ ಅನುಧಾನ ಕಡಿಮೆಯಾದ ಕಾರಣ ಮತ್ತೋಮ್ಮೆ ಕನ್ನಡ ಸಂಸ್ಕ್ರತಿ ಇಲಾಖೆಯಿಂದ 5 ಲಕ್ಷ ಹಾಗೂ ಬೇರೆ ಬೆರೆ ಅನುಧಾನದಿಂದ ಒಟ್ಟೂ 15 ಲಕ್ಷ ಅನುದಾನ ಬಳಸಿ 2011 ರಲ್ಲಿ ಉದ್ಘಾಟನೆ ಮಾಡಲಾಗಿದೆ. ಗಡಿ ತಾಲೂಕಿನ ಕನ್ನಡ ಭಾಷೆ,ನಾಡು ನುಡಿಯ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕಿದ್ದ ಈ ಕಟ್ಟಡ ,,,, ಕಳಪೆ ಕಾಮಗಾರಿ ಮತ್ತು ಕನಿಷ್ಟ ನಿರ್ಹಣೆಯಿಂದಾಗಿ ಪಾಳು ಬಿದ್ದ ಕಟ್ಟಡವಾಗಿ ಯಾವುದೇ ಕನ್ನಡ ಕಾರ್ಯಕ್ರಮಗಳಿಗೆ ಬಳಸಲು ಸಾದ್ಯವಿಲ್ಲ ಎನ್ನುವಂತಾಗಿದೆ.
ತಾಲೂಕಾಡಳಿತಾಗಲಿ,ಜಿಲ್ಲಾ ಪಂಚಾಯತ ಇಲಾಖೆಯಾಗಲಿ ಈ ಕಟ್ಟದ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡುತ್ತಿಲ್ಲ. ಕಟ್ಟದ ಬಣ್ಣ ಮಾಸಿ ಗೋಡೆಯ ಬಿರುಕುಗಳು ಕಾಣುತ್ತಿದೆ. ಕಿಟಕಿ ಬಾಗಿಲು ಒಡೆದಿದೆ. ಕಟ್ಟದ ಮುಂದೆ ಕಸದ ಕೊಂಪೆಯಾಗಿದೆ. ಸರಾಯಿ ಬಾಟಲಿಗಳು ಎಲ್ಲೆಂದರಲ್ಲಿ ರಾಶಿಯಾಗಿ ಬಿದ್ದು ಇದು ಆಕ್ರಮಗಳ ಅಡ್ಡೆಯಂತೆ ಕಾಣುವಂತಾಗಿದೆ.
ಕನ್ನಡ ಭವನವನ್ನು ನಿರ್ವಹಣೆ ಮಾಡುವ ಬಗ್ಗೆ ಜಿಲ್ಲಾ ಪಂಚಾಯತ ಇಂಜನಿಯರಿoಗ್ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಹಶೀಲ್ದಾರ್ ಸಂಜಯ ಕಾಂಬಳೆ ಹೇಳಿದರು. ಮಹ್ಮದ್ ಇಜಾನ್ ಸಬೂರ ಎ.ಇ.ಇ ಜಿಲ್ಲಾ ಪಂಚಾಯತ ಇಂಜನಿಯರಿoಗ್ ಇಲಾಖೆ ಜೊಯಿಡಾ ಇವರು ಮಾತನಾಡಿ, ಕನ್ನಡ ಭವನ ನಿರ್ವಹಣೆ ಮಾಡಲು ಯಾವುದೇ ಅನುಧಾನ ಬಂದಿಲ್ಲ. ಅನುದಾನ ಬಂದರೆ ಸರಿಪಡಿಸುತ್ತೇವೆ ಎಂದರು ಮಾಹಿತಿ ನೀಡಿದರು.,
ಜಿಲ್ಲಾ ಪಂಚಾಯತದಿoದ ಕನ್ನಡ ಭವನ ಮೆಲ್ಛಾವಣಿ ಮತ್ತು ಇನ್ನಿತರ ದುರಸ್ತಿಗಾಗಿ 2020 ರಲ್ಲಿ 1 ಲಕ್ಷ 50 ಸಾವಿರ ಅನುಧಾನ ಬಳಸಿ ದುರಸ್ತಿ ಮಾಡಲಾಗಿದೆ ಎಂದು ಕನ್ನಡ ಭವನ ಪಕ್ಕದಲ್ಲಿ ನಾಮ ಪಾಲಕ ಹಾಕಲಾಗಿದೆ. ಈ ಅನುಧಾನದಲ್ಲಿ ಕಾಮಗಾರಿ ಮಾಡಿದ್ದರೆ ಒಂದೆ ವರ್ಷದಲ್ಲಿ ಮತ್ತೆ ಪಾಳು ಬಿದ್ದ ಕಟ್ಟಡದಂತಾಗಿರುವುದು ವಿಪರ್ಯಾಸ. ಈ ಅನುದಾನ ಬಳಕೆಯಾಗಿದ್ದು ಎಲ್ಲಿ ಎಂದು ಸಂಬoಧಿಸಿದ ಅಧಿಕಾರಿಗಳೆ ತಿಳಿಸಬೇಕು.
ವಿಸ್ಮಯ ನ್ಯೂಸ್, ಜೋಯ್ಡಾ