ಸಿದ್ದಾಪುರ: ಅತ್ಯುತ್ತಮ ರೀತಿಯ ಚಿತ್ರಕಲೆ ಮತ್ತು ವಿನೂತನ ಶೈಲಿಯ ಚಿತ್ರಗಳಿಂದಾಗಿ ತಾಲೂಕಿನ ಮಗದೂರಿನ ರವೀಂದ್ರ ರಾಮಕೃಷ್ಣ ಹೆಗಡೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ರವೀಂದ್ರ ಹೆಗಡೆಯವರು ಕೇವಲ ಎರಡು ಗಂಟೆಗಳಲ್ಲಿ ಕೈಗಡಿಯಾರದ ಹರಳಿನ ಮೇಲೆ ಒಂಬತ್ತು ಚಿತ್ರಗಳನ್ನು ಚಿತ್ರಿಸಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಶ್ರೀರಾಮಚಂದ್ರಾಪುರ ಮಠದ ಶ್ರೀಭಾರತೀ ಗುರುಕುಲಂನಲ್ಲಿ ಪ್ರೌಢಶಿಕ್ಷಣ ಪೂರೈಸಿರುವ ಇವರು, ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಎಂಜನಿಯರಿoಗ್ ಪದವಿ ಪಡೆದಿದ್ದಾರೆ. ವೀರಸಾವರ್ಕರ, ಸುಭಾಶ್ಚಂದ್ರ ಭೋಸ್, ಸ್ವಾಮಿ ವಿವೇಕಾನಂದ, ಮಹರ್ಷಿ ವಾಲ್ಮೀಕಿ, ಶ್ರೀ ರಾಘವೇಶ್ವರಭಾರತೀ ಶ್ರೀಗಳು, ಶ್ರೀ ಗಂಗಾಧರೇoದ್ರ ಸರಸ್ವತೀ ಸ್ವಾಮಿಗಳು, ಈಶ ಫೌಂಡೇಶನ್‌ನ ‘ಸದ್ಗುರು’, ಯದುವೀರ ರಾಜರು ಸೇರಿದಂತೆ ನೂರಾರು ಚಿತ್ರಗಳನ್ನು ಬಿಡಿಸಿ, ಸೈ ಎನಿಸಿಕೊಮಡಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತನಾಮರಾದ ಸುದೀಪ, ಉಪೇಂದ್ರ, ರಮೇಶ ಅರವಿಂದ, ರಕ್ಷಿತ್ ಶೆಟ್ಟಿ, ಮುಂತಾದವರ ಚಿತ್ರಗಳನ್ನು ಚಿತ್ರಿಸಿ ಅವರಿಂದ ಮೆಚ್ಚುಗೆ ಪಡೆದಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ