Follow Us On

WhatsApp Group
Important
Trending

ಹೇಗಿರಲಿದೆ ವೀಕೆಂಡ್ ಕರ್ಪ್ಯೂ? ಯಾವುದಕ್ಕೆಲ್ಲ ಇದೆ ಅವಕಾಶ: ಯಾವುದೆಲ್ಲ ನಿಷೇಧ: ಮಾರ್ಗಸೂಚಿ ಹೇಗಿದೆ ನೋಡಿ?

ಯಾವ ಅಂಗಡಿ ಓಪನ್: ಯಾವ ಅಂಗಡಿ ಬಂದ್: ಅಗತ್ಯ ಸೇವೆಗೆ ಮಾತ್ರ ಇದೆ ಅವಕಾಶ

ಕಾರವಾರ: ದೇಶದಾದ್ಯಂತ ಕೋವಿಡ್ 3 ನೇ ಅಲೆಯ ಆತಂಕ ಅತಿಯಾಗಿರುವ ಹಿನ್ನೆಲೆಯಲ್ಲಿ ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ಉದ್ಧೇಶದಿಂದ ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿದ್ದು, ಆಯಾ ಜಿಲ್ಲೆಗಳಲ್ಲಿ ಕೋವಿಡ್ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಜಿಲ್ಲಾಡಳಿತದ ನಿರ್ದೇಶನದಂತೆ ಕುಮಟಾ ತಾಲೂಕಿನಲ್ಲಿ ಕೋವಿಡ್ 3 ನೇ ಅಲೆಯ ತಡೆಗಟ್ಟುವ ನಿಟ್ಟಿನಲ್ಲಿ ಜನವರಿ 19 ರ ವೆರೆಗೆ ವಿಧಿಸಲಾಗುವ ಮಾರ್ಗಸೂಚಿಯನ್ನು ಬಿಡುಗಡೆ ಗೊಳಿಸಲಾಗಿದೆ. ಕಾರವಾರ, ಅಂಕೋಲಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ ಸೇರಿದಂತೆ ಬಹುತೇಕ ತಾಲೂಕಿನಲ್ಲಿ ವಾರಾಂತ್ಯದ ಕರ್ಪ್ಯೂ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ.

ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗಿನ ಜಾವ 5 ಘಂಟೆಯವರೆಗೆ ವೀಕ್ ಎಂಡ್ ಕರ್ಪ್ಯೂ ಜಾರಿಯಲ್ಲಿ ಇರುತ್ತದೆ. ಈ ಸಮಯದಲ್ಲಿ ಅತಿ ಅವಶ್ಯಕವಾದ ಮೆಡಿಕಲ್, ಆರೋಗ್ಯ ಸೇವೆಗಳು, ದಿನಸಿ, ತರಕಾರಿ, ಹಾಲು, ಹೊರತು ಪಡಿಸಿ ಸಾರ್ವಜನಿಕರ ಅನಾವಶ್ಯಕ ಒಡಾಟವನ್ನು ನಿಷೇಧಿಸಲಾಗಿದೆ. ವಾರಾಂತ್ಯ ಬಿಟ್ಟು ಇತರೆ ದಿನಗಳಲ್ಲಿ ಕೋವಿಡ್ ನಿಯಮದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕಧರಿಸಿ ಒಡಾಡುವಂತೆ ಸೂಚಿಸಲಾಗಿದೆ. ನಾಳೆ ಮಾತ್ರ ಅಗತ್ಯ ಸೇವೆ ಹೊರತು ಪಡಿಸಿ ಎಲ್ಲವು ಬಂದ್ ಆಗಲಿದೆ.

ಹೋಟೇಲ್‌ಗಳಲ್ಲಿ ಪಾರ್ಸಲಗೆ ಮಾತ್ರ ಅವಕಾಶ ನೀಡಲಾಗಿದೆ. ಪೂರ್ವ ನಿಗದಿತ ಮದುವೆಗಳನ್ನು ನಡೆಸಲು ಒಳಾಂಗಣದಲ್ಲಿ 100 ಜನರಿಗೆ, ಹೊರಾಂಗಣದಲ್ಲಿ 200 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದಕ್ಕೆ ಅನುಮತಿ ಕಡ್ಡಾಯವಾಗಿ ಪಡೆದಿರಬೇಕು. ಮಾಸ್ಕ ಮತ್ತು ಸಾಮಾಜಿಕ ಅಂತರ ಪಾಲಿಸಬೇಕು. ಸರ್ಕಾರದ ನಿಯಮ ಪಾಲಿಸದೆ ಇದ್ದಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕರಿಗೆ ಉದ್ಯಾನವನಕ್ಕೆ ಪ್ರವೇಶಿಸಲು ನಿಷೇಧ ಹೇರಲಾಗಿದೆ. ಕೈಗಾರಿಕೆಗಳಿಗೆ ಎಂದಿನoತೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದ್ದು, ಕೈಗಾರಿಕೆಯ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕಿದೆ. ರೋಗಿಗಳು ಹಾಗೂ ಅವರ ಸಂಗಡಿಗರು ಆಸ್ಪತ್ರೆ ಹಾಗೂ ವೈದ್ಯಕೀಯ ಕೇಂದ್ರಗಳಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದ್ದು, ಪೂರಕ ದಾಖಲೆಗಳನ್ನು ಹೊಂದಿರಬೇಕಿದೆ. ಹೋಟೇಲ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಪಾರ್ಸಲ್ ವ್ಯವಸ್ಥೆಗೆ ಮಾತ್ರ ಅನುಮತಿ ನೀಡಲಾಗಿದೆ. ಈ ಹಿಂದೆ ಲಾಕ್‌ಡೌನ್ ಇದ್ದಂತಹ ಸಂದರ್ಭದಲ್ಲಿ ಕುಮಟಾ ತಾಲೂಕಿನ ಸಾರ್ವಜನಿಕರು ನೀಡಿದ ಸಹಕಾರವನ್ನು ಈ ಭಾರಿಯು ಸಹ ನೀಡಿ ತಾಲೂಕಾಡಳಿತದೊಂದಿಗೆ ಕೈಜೋಡಿಸಬೆಕು ಎಂದು ವಿವೇಕ್ ಶೇಣ್ವಿ ಅವರು ವಿನಂತಿಸಿಕೊoಡಿದ್ದಾರೆ.

ಪ್ರತಿ ಸೋಮವಾರದಿಂದ ಗುರುವಾರದವೆರೆಗೆ ಅಗತ್ಯ ಹಾಗೂ ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ ರಾತ್ರಿ 10 ಗಂಟೆಯಿoದ ಮುಂಜಾನೆ 5 ರವೆಗೆ ಕರ್ಪ್ಯೂ ವಿಧಿಸಲಾಗಿದೆ. ರಂಗಮoದಿರ, ಸಿನೇಮಾ ಥಿಯೇಟರ್, ಹೋಟೇಲ್, ರೆಸ್ಟೋರೆಂಟ್ ಹಾಗೂ ಬಾರ್‌ಗಳು ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಿ ಗರಿಷ್ಠ 50% ಆಸನ ಮಿತಿಯೊಂದಿಗೆ ಕಾರ್ಯನಿರ್ವಹಿಸತಕ್ಕದ್ದು ಹಾಗೂ ಕೋವಿಡ್ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ನೀಡಬೆಕೆಂದು ತಿಳಿಸಲಾಗಿದೆ.

ಕೋವಿಡ್ 3ನೇ ಅಲೆಯ ಆತಂಕ ಎದುರಾದ ಹಿನ್ನಲೆ ಪುರಸಭೆ, ಪೊಲೀಸ್, ಆರೋಗ್ಯ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಸಾರ್ವಜನಿಕವಾಗಿ ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ವಿಧಿಸುವ ಜೊತೆಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಕಾರ್ಯಾಚರಣೆ ಪಟ್ಟಣಕ್ಕೂ ವ್ಯಾಪಿಸಲಿದ್ದು, ಸಾರ್ವಜನಿಕ ಸ್ಥಳಗಳಲ್ಲೂ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಲಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.

Back to top button