ಶಿರಸಿ: ಅಡಿಕೆ ತೋಟವೊಂದರ ಮಾಲೀಕ ಮಂಗಗಳನ್ನು ಹೊಡೆಯಲು ಹಾರಿಸಿದ ಗುಂಡು ತಗುಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಬಕ್ಕಳ ಗ್ರಾಮದಲ್ಲಿ ನಡೆದಿದೆ. ಬಕ್ಕಳದ ದೇವರು ಪರಮೇಶ್ವರ ಭಟ್ಟ (67) ಗುಂಡುಹಾರಿಸಿದ ಆರೋಪಿ. ಇವರತೋಟದ ಕೆಲಸಕ್ಕೆ ಬರುತ್ತಿದ್ದ ಔಡಾಳ ಗ್ರಾಮದ ಕೇಶವ ರಾಮ ಮರಾಠಿ (27) ಗಾಯಗೊಂಡವರು.
ಅಡಿಕೆ ತೋಟದಲ್ಲಿ ಲಗ್ಗೆಯಿಟ್ಟಿದ್ದ ಮಂಗಗಳ ಮೇಲೆ ಗುಂಡುಹಾರಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗುಂಡು ತಗುಲಿದ ಪರಿಣಾಮ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಭುಜ, ಕೆನ್ನೆ ಹಾಗೂ ತಲೆಗೆ ತೀವ್ರ ಪೆಟ್ಟಾಗಿದೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಶಿರಸಿ
ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091