ಹೊನ್ನಾವರ: ಪಟ್ಟಣದ ತಾರಿಯ ಹತ್ತಿರ ಮತ್ತು ರೈಲ್ವೆ ಬ್ರೀಜ್ ಸಮೀಪ ಪೋಟೋ ಶೂಟ್ ನಡೆಯುತ್ತಲೆ ಇರುತ್ತದೆ. ಇಂದು ವಾರಾಂತ್ಯದ ಕರ್ಪ್ಯೂ ಇದ್ದರು ಬೆಂಗಳೂರಿನಿಂದ ಆಗಮಿಸಿದ ಜೋಡಿ, ಮತ್ತು ಪೋಟೋ ಗ್ರಾಫರ್ ಹಾಗು ಇಬ್ಬರು ದೋಣಿ ಸವಾರರು ಫೋಟೋ ಶೂಟ್ ನಲ್ಲಿ ನಿರತರಾಗಿದ್ದರು. ಹೀಗಾಗಿ ಈ ಐದು ಜನರ ವಿರುದ್ದ ಪ್ರಕರಣ ದಾಖಲಿಸಿ ಬೋಟ್ ವಶಕ್ಕೆ ಪಡೆಯಲಾಗಿದೆ.
ಮಾವಿನಕುರ್ವಾ ಅಮ್ಕೂಸ್ ತಂದೆ ತಿಮ್ಮಪ್ಪ ಗೌಡ, ಬೆಂಗಳೂರಿನ ಫೋಟೋಗ್ರಾಫರ್ ಸಿ. ಪಳನಿ ಚಂದ್ರನ್ ಎಸ್, ಬೆಂಗಳೂರಿನ ಸಾಪ್ಟವೇರ್ ಇಂಜಿನಿಯರ್, ಗೌತಮ್ ಯು ಉಮಾಪತಿ ವಿ, ಬೆಂಗಳೂರಿನ ಇಂಜಿನೀಯರ್ ಕುಮಾರಿ ಸೌಮ್ಯ ಕೆ. ಪಿ. ಕೃಷ್ಣ, ಮಾವಿನಕುರ್ವಾದ ಗಜಾನನ ಶಂಭು ಗೌಡ, ಮತ್ತು ವಿರಾಂಜನೇಯ ಹೆಸರಿನ ಬೋಟ್ ವಶಕ್ಕೆ ಪಡೆಯಲಾಗಿದೆ.
ಇವರು ಸರ್ಕಾರದ ವಾರಾಂತ್ಯದ ಲಾಕ್ ಡೌನ್ ಆದೇಶ ಇದ್ದರೂ ಸಹ ಆದೇಶ ಉಲ್ಲಂಘಿಸಿ ಉದ್ದೇಶ ಪೂರ್ವಕವಾಗಿ ಮಾಸ್ಕ್ ಹಾಕದೇ, ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಪೋಟೋ ಶೂಟ್ ಮಾಡಿದ್ದರು., , ಬೋಟ್‌ನಲ್ಲಿ ಜೀವರಕ್ಷಕ ಲೈಫ್ ಜಾಕೆಟ್‌ಗಳನ್ನು ಇಟ್ಟುಕೊಳ್ಳದೇ ನಿರ್ಲಕ್ಷ್ಯದ ಕೃತ್ಯ ಎಸಗಿದ್ದು, ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ