ಹೆಚ್ಚಳ ಕಂಡ ಕೋವಿಡ್ ಕೇಸ್: ಜಿಲ್ಲೆಯಲ್ಲಿ ಒಂದು ಸಾವು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಪಾಸಿಟಿವ್
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸಂಖ್ಯೆ ಏರುತ್ತಲೇ ಇದೆ. ಜಿಲ್ಲಾಡಳಿತ ಪ್ರಕಟಿಸಿರುವ ಹೆಲ್ತ್ ಬುಲೆಟಿನ್ ಪ್ರಕಾರ ಇಂದು ಜಿಲ್ಲೆಯಾದ್ಯಂತ 104 ಕೋವಿಡ್ ಕೇಸ್ ದೃಢಪಟ್ಟಿದೆ. ಕಾರವಾರ 33, ಅಂಕೋಲಾ 8, ಕುಮಟಾ 13, ಹೊನ್ನಾವರ 19, ಭಟ್ಕಳ 4, ಶಿರಸಿ 11, ಯಲ್ಲಾಪುರ 3, ಹಳಿಯಾಳ 5, ಜೋಯ್ಡಾದಲ್ಲಿ 8 ಕೇಸ್ ದೃಢಪಟ್ಟಿದೆ. 10 ಮಂದಿ ವಿವಿಧ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 367 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಳಿಯಾಳ ತಾಲೂಕಿನಲ್ಲಿ ಒಂದು ಸಾವು ವರದಿಯಾಗಿದೆ.
ಕೋವಿಡ್ ಆತಂಕ ಹೆಚ್ಚುತ್ತಿದ್ದು, ಸಾರ್ವಜನಿಕ ಸೇವೆಯಲ್ಲಿರುವ ಪ್ರಮುಖರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಅವರಿಗೆ ಪಾಸಿಟಿವ್ ಬಂದಿದೆ. ಕಳೆದ ಎರಡು ಮೂರುದಿನದಿಂದ ಅಲ್ಪ ಪ್ರಮಾಣದ ಕೋವಿಡ್ ಲಕ್ಷಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು, ವರದಿ ಪಾಸಿಟಿವ್ ಬಂದಿದೆ. ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ