200ರ ಗಡಿ ದಾಟಿದ ಕೋವಿಡ್ ಕೇಸ್; ಮತ್ತಷ್ಟು ಆತಂಕ

ಕಾರವಾರ: ಕೋವಿಡ್ ಕೇಸ್ ಉತ್ತರ ಕನ್ನಡದಲ್ಲಿ ಹೆಚ್ಚುತ್ತಲೇ ಇದೆ. ಜಿಲ್ಲಾಡಳಿತದ ಹೆಲ್ತ್‌ಬುಲೆಟಿನ್ ನ ಪ್ರಕಾರ ಇಂದು 224 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

ಹೆಲ್ತ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 119, ಹೊನ್ನಾವರ 8, ಭಟ್ಕಳದಲ್ಲಿ 28, ಶಿರಸಿಯಲ್ಲಿ 7, ಸಿದ್ದಾಪುರದಲ್ಲಿ 5,ಅಂಕೋಲಾದಲ್ಲಿ 14, ಕುಮಟಾದಲ್ಲಿ 15, ಯಲ್ಲಾಪುರದಲ್ಲಿ 18, ಮುಂಡಗೋಡ 2, ಹಳಿಯಾಳದಲ್ಲಿ 5, ಮತ್ತು ಜೋಯಿಡಾದಲ್ಲಿ 3 ಒಟ್ಟು 224 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಸಕ್ರೀಯ ಸೋಂಕಿತರ ಸಂಖ್ಯೆ 621 ಆಗಿದ್ದು, ಅವರಲ್ಲಿ 59 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 562 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Exit mobile version