ಯಕ್ಷಗಾನ ಅಕಾಡೆಮಿಯ‌ ನೂತನ ಅಧ್ಯಕ್ಷರಾಗಿ ಡಾ. ಜಿ.ಎಲ್.ಹೆಗಡೆ‌ ಸ್ವೀಕಾರ

ಕುಮಟಾ: ಯಕ್ಷಗಾನ ಅಕಾಡೆಮಿಯ‌ ನೂತನ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ‌ ಅವರು ಶುಕ್ರವಾರ ಯಕ್ಷಗಾನ ಅಕಾಡೆಮಿಯ‌ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಬಳಿಕ‌ ಮಾತನಾಡಿದ ಅವರು ಯಕ್ಷಗಾನ ಉಳಿದರೆ ಕನ್ನಡ ಉಳಿಯುತ್ತದೆ. ಅಕಾಡೆಮಿಯೂ ಉಳಿಯುತ್ತದೆ. ಯಕ್ಷಗಾನ ರಾಜ್ಯದ, ದೇಶದ ಕಲೆಯಾಗಬೇಕು. ಪ್ರಪಂಚದ ಎಲ್ಲಡೆ ಮನ ಗೆಲ್ಲಿಸುವ ಕೆಲಸ ಆಗಬೇಕು.

ಎಲ್ಲರೂ ಸೇರಿ ಯಕ್ಷಗಾನ, ಮೂಡಲಪಾಯದ ಏಳ್ಗೆಗೆ ಕೆಲಸ‌ ಮಾಡಬೇಕು. ಎಲ್ಲರೂ ಸೇರಿ‌ ಒಂದಾಗಿ ಕೆಲಸ ಮಾಡಬೇಕಿದೆ. ಕಲೆಯನ್ನು ಜನ, ಸರಕಾರ ಎರಡೂ ಸೇರಿ ಉಳಿಸಿ ಬೆಳೆಸಬೇಕು ಎಂದರು.ಯಕ್ಷಗಾನ ಅಕಾಡೆಮಿ ನೀಡುವ ಗೌರವ ಪ್ರಶಸ್ತಿ, ಯಕ್ಷಸಿರಿ‌ ಪ್ರಶಸ್ತಿ ಪ್ರದಾನ ಆಗಬೇಕಾದ. ಕೋವಿಡ್ ಸೋಂಕಿನ ಪರಿಣಾಮ ನೋಡಿಕೊಂಡು, ಸಚಿವರ ಜೊತೆ‌ ಸಮಾಲೋಚಿಸಿ, ಪ್ರಶಸ್ತಿ ಪ್ರದಾನದ ದಿನಾಂಕ‌ ನಿಗದಿ ಮಾಡಲಾಗುತ್ತದೆ. ಯಕ್ಷಗಾನದ ಪರಿಚಾರಕರಾದ ನಮಗೆ ಇಂಥದೊಂದು ಸೇವೆ‌ ಸಲ್ಲಿಸಲು ಸರಕಾರ ಅವಕಾಶ‌ಮಾಡಿಕೊಟ್ಟಿದೆ. ಈ ಜವಬ್ದಾರಿ ನಿರ್ವಹಿಸಲು ಅವಕಾಶ ಕೊಟ್ಟವರಿಗೆ ಕೃತಜ್ಞತೆ ಸಲ್ಲಿಸುವದಾಗಿ ಕೂಡ  ತಿಳಿಸಿದರು‌.

ಈ ವೇಳೆ ಅಕಾಡೆಮಿಯ ರಿಜಿಸ್ಟ್ರಾರ್ ಶಿವರುದ್ರಪ್ಪ, ಜಾನಪದ ಅಕಾಡೆಮಿ ಜಾಹ್ನವಿ,ಸದಸ್ಯ ಶ್ರೀನಿವಾಸ ಸಾಸ್ತಾನ, ಶೇಖರ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಹೆಗಡೆ ಹೆರವಟ್ಟ, ಹಿರಿಯ ಲೆಕ್ಕಪರಿಶೋಧಕ ಗೋಪಾಲಕೃಷ್ಣ ಹೆಗಡೆ, ಡಾ. ಶ್ರೀಪಾದ ಹುಕ್ಲಮಕ್ಕಿ, ಯಕ್ಷಗಾನ ಸಂಶೋಧಕಿ ಮಮತಾ ಜೋಶಿ,ಉದ್ಯಮಿ ಶಾಂತಾರಾಮ‌ ಭಟ್ಟ  ಇತರರು ಇದ್ದರು.

Exit mobile version