14 ವಿದ್ಯಾರ್ಥಿಗಳಲ್ಲಿ ಸೋಂಕು: ಎರಡು ಶಾಲೆಗಳು ಬಂದ್: ಜಿಲ್ಲಾಧಿಕಾರಿಗಳ ಆದೇಶ: ಹೊನ್ನಾವರದಲ್ಲಿ ಎಲ್ಲೆಲ್ಲಿ ಸೋಂಕು ಕಾಣಿಸಿಕೊಂಡಿದೆ ನೋಡಿ?

ಹೊನ್ನಾವರ: ಪಟ್ಟಣದ ಪ್ರಭಾತನಗರ ಶಾಲೆಯ 14 ವಿದ್ಯಾರ್ಥಿಗಳಿಗೆ ಸೋಂಕು ಕಂಡುಬಂದಿದೆ. ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಕಂಡು ಬಂದ ಹಿನ್ನಲೆಯಲ್ಲಿ ಜನವರಿ 20ರವರೆಗೆ ಶಾಲೆಗೆ ರಜೆ ನೀಡಿ ಆದೇಶಿಸಲಾಗಿದೆ.

ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ
ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಆದೇಶದ
ಮೇರೆಗೆ ಹೊನ್ನಾವರ ನಗರದಲ್ಲಿನ ಸರ್ಕಾರಿ ಪ್ರೌಢಶಾಲೆ
ಪ್ರಭಾತನಗರ ಹೊನ್ನಾವರ ಹಾಗೂ ಸರ್ಕಾರಿ ಪ್ರಾಥಮಿಕ
ಶಾಲೆ ಪ್ರಭಾತನಗರ ಈ ಎರಡು ಶಾಲೆಗಳಿಗೆ ಜನವರಿ
20ರವರೆಗೆ ರಜೆ ನೀಡಿ ಆದೇಶಿಸಲಾಗಿದೆ.

ಹೊನ್ನಾವರ ತಾಲೂಕಿನಲ್ಲಿ ಇಂದು 53 ಜನರಲ್ಲಿ ಕರೋನಾ ಪಾಸಿಟಿವ್ ಕಂಡುಬಂದಿದೆ. ಪಟ್ಟಣದ ಕೆಳಗಿನ ಪಾಳ್ಯದ 23 ಪುರುಷ, 45 ವರ್ಷದ ಮಹಿಳೆ,. 19 ವರ್ಷದ ಯುವತಿ, ಪಟ್ಟಣದ 15 ವರ್ಷದ 29 ವರ್ಷದ ಯುವಕ. 21 ವರ್ಷದ ಯುವಕ, 63 ವರ್ಷದ ಪುರುಷ,(ಕೃಪೆ: ವಿಸ್ಮಯ ಟಿ.ವಿ)
ಪ್ರಭಾತ ನಗರದ 54 ವರ್ಷದ ಪುರುಷ,. 15 ವರ್ಷದ ಬಾಲಕ,‌16 ವರ್ಷದ ಬಾಲಕ, 13 ವರ್ಷದ ಬಾಲಕಿ. 13 ವರ್ಷದ ಬಾಲಕಿ. 11 ವರ್ಷದ ಬಾಲಕ. 9 ವರ್ಷದ ಬಾಲಕ. 14 ವರ್ಷದ ಬಾಲಕಿ,. 12 ವರ್ಷದ ಬಾಲಕಿ. 13 ವರ್ಷದ ಬಾಲಕಿ,. 13 ವರ್ಷದ ಬಾಲಕಿ., 13 ವರ್ಷದ ಬಾಲಕಿ,. 14 ವರ್ಷದ ಬಾಲಕಿ, 14 ವರ್ಷದ ಬಾಲಕಿ. 15 ವರ್ಷದ ಬಾಲಕ. 15 ವರ್ಷದ ಬಾಲಕ, 13 ವರ್ಷದ ಬಾಲಕನಿಗೆ ಸೋಂಕು ಕಂಡುಬಂದಿದೆ.

ಚಂದಾವರದ 12 ವರ್ಷದ ಬಾಲಕ. 12 ವರ್ಷದ ಬಾಲಕಿ.
ಮಂಕಿಯ 46 ವರ್ಷದ ಪುರುಷ. 51 ವರ್ಷದ ಪುರುಷ. 30 ವರ್ಷದ ಯುವತಿ, ಕಡತೋಕಾದ 77 ವರ್ಷದ ಪುರುಷ. ಹೋದ್ಕೆಶಿರೂರಿನ 33 ವರ್ಷದ ಮಹಿಳೆ, 27 ವರ್ಷದ ಯುವತಿಗೆ ಸೋಂಕು ಕಂಡುಬಂದಿದೆ.

ಸಾಲಕೋಡಿನ 26 ವರ್ಷದ ಪುರುಷ, 5 ವರ್ಷದ ಬಾಲಕ. ಕರ್ಕಿಯ 80 ವರ್ಷದ ಮಹಿಳೆ, 29 ವರ್ಷದ ಯುವತಿ. 39 ವರ್ಷದ ಪುರುಷ ಗುಣವಂತೆಯ 58 ವರ್ಷದ ಪುರುಷ. ಕಾಸರಕೋಡಿನ 45 ವರ್ಷದ ಪುರುಷ. 19 ವರ್ಷದ ಯುವತಿ. 12 ವರ್ಷದ ಬಾಲಕಿ,ಬೇರೋಳ್ಳಿಯ 65 ವರ್ಷದ ಮಹಿಳೆ. 30 ವರ್ಷದ ಯುವತಿಗೆ ಪಾಸಿಟಿವ್ ಬಂದಿದೆ.

ಇಡಗುಂಜಿಯ 14 ವರ್ಷದ ಬಾಲಕಿ. 13 ವರ್ಷದ ಬಾಲಕಿ. 14 ವರ್ಷದ ಬಾಲಕಿ. ಳ, 13 ವರ್ಷದ ಬಾಲಕ, 14 ವರ್ಷದ ಬಾಲಕನಿಗೆ ಪಾಸಿಟಿವ್ ಬಂದಿದ್ದು, ಇಂದು ಪತ್ತೆಯಾದ ಪಾಸಿಟಿವ್ ಪ್ರಕರಣಗಳ ಪೈಕಿ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಕಂಡು ಬಂದಿದೆ.

ಅಂಕೋಲಾದಲ್ಲಿ ಪುರಸಭೆ ಮುಖ್ಯಾಧಿಕಾರಿಗೂ ಸೋಂಕು ಪತ್ತೆ ?.

ಅಂಕೋಲಾ ತಾಲೂಕಿನಲ್ಲಿ ಶುಕ್ರವಾರ, ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಒಟ್ಟು 41 ಜನರಲ್ಲಿ ಸೋಂಕು ಲಕ್ಷಣ ಕಂಡು ಬಂದಿದೆ. ವಿಕೆಂಡ್ ಲಾಕ್ ಡೌನ ಸೇರಿದಂತೆ ಇತರೆ ಸಂದರ್ಭಗಳಲ್ಲಿ ಸ್ವತಃ ಮುಖ್ಯಾಧಿಕಾರಿಗಳೇ ರಸ್ತೆಗಿಳಿದು, ಜನಜಾಗೃತಿ, ಮಾಸ್ಕ ಧರಿಸಧವರಿಗೆ ದಂಡ ವಿಧಿಸುವುದು ಮತ್ತಿತರ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ 2 ನೇ ಬಾರಿ ಸೋಂಕು ಲಕ್ಷಣ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಅವರು ಹೋಂ ಐಸೋಲೇಶನ್ ಗೆ ಒಳಗಾಗಿದ್ದಾರೆ.

ಕೆ.ಎಲ್. ಇ ಸಂಸ್ಥೆಯಿಂದ ಪಟ್ಟಣದಲ್ಲಿ ನಡೆಸಲ್ಪಡುತ್ತಿರುವ ಪ್ರಮುಖ ಹಾಸ್ಟೆಲ್ ಒಂದರಲ್ಲಿದ್ದ 20 ಕ್ಕೂ ಹೆಚ್ಚು ಮಹಿಳೆಯರಲ್ಲಿ ಕೋವೀಡ್ ಪಾಸಿಟಿವ್ ಕಂಡು ಬಂದಿದೆ. ಈ ಮೂಲಕ ತಾಲೂಕಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 80 ಕ್ಕೆ ಏರಿಕೆಯಾಗಿದೆ.ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು,ಚಳಿಗಾಲದ ಈ ಸಂದರ್ಭದಲ್ಲಿ ವಿಶೇಷ ಮುನ್ನೆಚ್ಚರಿಕೆ ಅಗತ್ಯ ಎನ್ನುವುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ ಮತ್ತು ವಿಲಾಸ ನಾಯಕ ಅಂಕೋಲಾ

Exit mobile version