Important
Trending

ಹೆಂಡತಿ ಮತ್ತು ಗೆಳೆಯನ ಕಳೆದುಕೊಂಡ ಬೇಸರ: ಸಾವಿಗೆ ಶರಣಾದ ಕಾರ್ಮಿಕ

ಅಂಕೋಲಾ: ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಸಕಲಬೇಣದಲ್ಲಿ ನಡೆದಿದೆ.ಅವರ್ಸಾ ಸಕಲಬೇಣ ನಿವಾಸಿ ವಿನೋದ ಮೊನ್ನಾ ಆಗೇರ(39) ಮೃತ ವ್ಯಕ್ತಿಯಾಗಿದ್ದಾನೆ. ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಸರಾಯಿ ಕುಡಿತದ ಗೀಳು ಅಂಟಿಸಿಕೊಂಡಿದ್ದ ಎನ್ನಲಾಗಿದ್ದು ಸುಮಾರು 12 ವರ್ಷಗಳ ಹಿಂದೆ ತನ್ನನ್ನು ಹೆಂಡತಿ ಬಿಟ್ಟು ಹೋದ ವಿಷಯ ಮನಸ್ಸಿಗೆ ಹಚ್ಚಿಕೊಂಡಿದ್ದ ಎನ್ನಲಾಗಿದೆ.

ಅಲ್ಲದೇ ಈತನ ಜೊತೆ ಕೂಲಿ  ಕೆಲಸಕ್ಕೆ ಸಾಥ ನೀಡುತ್ತಿದ್ದ   ಓರ್ವ ಗೆಳೆಯನೂ ಕಳೆದ ಕೆಲ ದಿನಗಳ ಹಿಂದಷ್ಟೇ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದು, ಗೆಳೆಯನ ಅಗಲುವಿಕೆಯೂ ವಿನೋದ ಆಗೇರ ಇವರ ಮಾನಸಿಕ ಸ್ಥಿತಿಗತಿಗಳ ಮೇಲೆ ಪರಿಣಾಮ ಬೀರಿರಬಹುದು ಎಂಬ ಮಾತು ಕೆಲ ಸ್ಥಳೀಯರಿಂದ ಕೇಳಿ ಬಂದಂತಿದೆ. ಒಟ್ಟಿನಲ್ಲಿ ಈತನ ಸಾವಿಗೆ ನಿಖರ ಕಾರಣಗಳು ತಿಳಿದು ಬಂದಿಲ್ಲವಾದರೂ , ಯಾವುದೋ ಕಾರಣದಿಂದ ನೊಂದು ಸಾವಿಗೆ ಶರಣಾದಂತಿದೆ.ವಿನೋದ ಅಗೇರ  . ಈತನ ಮೃತ ದೇಹ  ಶುಕ್ರವಾರ ಮನೆಯ ಪಕಾಸಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು,ಈ ಕುರಿತು ಮೃತನ ಸಹೋದರ ಅಂಕೋಲಾ ಪೊಲೀಸ್ ಠಾಣೆಯಲ್ಲಿ   ದೂರು ದಾಖಲಿಸಿದ್ದು,ಪ್ರಕರಣ ದಾಖಲಿಸಿ ಕೊಂಡ ಪೋಲೀಸರು ತನಿಖೆ ಕೈಗೊಂಡಿದ್ದಾರೆ.                 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ: ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ

Back to top button