Important
Trending

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವನ ಮೇಲೆ ದಾಳಿ ಮಾಡಿದ ಕರಡಿ

ಮುಖಕ್ಕೆ ಕಚ್ಚಿ ಗಂಭೀರ ಗಾಯ
ನಡುರಸ್ತೆಯಲ್ಲೇ ಬಿದ್ದಿದ್ದ ಗಾಯಗೊಂಡ ವ್ಯಕ್ತಿ

ಜೋಯಿಡಾ: ತಾಲೂಕಿನ ರಾಮನಗರ ಧಾರವಾಡ ರಸ್ತೆಯಲ್ಲಿನ ನಾಗರವಾಳಿ ಸಮೀಪ ರಸ್ತೆಯಲ್ಲಿ ಸಾಗುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಇತ್ತಿಚೆಗೆ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕರಡಿ ಏಕಾಏಕಿ ದಾಳಿ ನಡೆಸಿದ್ದು, ವ್ಯಕ್ತಿ ಮಾರಣಾಂತಿಕವಾಗಿ ಗಾಯಗೊಂಡಿದ್ದಾನೆ.

ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವೇಳೆ ಅರಣ್ಯದಿಂದ ನುಗ್ಗಿಬಂದ ಕರಡಿ ದಾಳಿ ನಡೆಸಿದ್ದು, ಮುಖದ ಭಾಗವನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿ, ರಸ್ತೆ ಮಧ್ಯದಲ್ಲಿಯೇ ಬಿದ್ದಿದ್ದು, ಈ ವೇಳೆ ವಾಹನ ಸವಾರರು, 108 ವಾಹನಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ರಾಮನಗರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಕರೆದೊಯ್ಯಲಾಗಿದೆ.

ವಿಸ್ಮಯ ನ್ಯೂಸ್, ಜೋಯಡಾ

Related Articles

Back to top button