ಉತ್ತರಕನ್ನಡದಲ್ಲಿ 600 ಕೋವಿಡ್ ಕೇಸ್: ಎಲ್ಲಾ ತಾಲೂಕಿನಲ್ಲಿ ಹೆಚ್ಚಿದ ಸೋಂಕಿತರ ಸಂಖ್ಯೆ

ಕಾರವಾರ: ಉತ್ತರಕನ್ನಡದಲ್ಲಿ ಕೋವಿಡ್ ಹೆಚ್ಚುತ್ತಲೇ ಇದೆ. ಜಿಲ್ಲಾಡಳಿತ ಪ್ರಕಟಿಸಿದ ಹೆಲ್ತ್ ಬುಲೆಟಿನ್ ಪ್ರಕಾರ ದಿನಾಂಕ ಬುಧವಾರ 600 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕಾರವಾರದಲ್ಲಿ 159, ಕುಮಟಾದಲ್ಲಿ 82, ಅಂಕೋಲಾದಲ್ಲಿ 58, ಹೊನ್ನಾವರ 60, ಸಿದ್ದಾಪುರದಲ್ಲಿ 32, ಯಲ್ಲಾಪುರದಲ್ಲಿ 30, , ಭಟ್ಕಳದಲ್ಲಿ 16, ಶಿರಸಿಯಲ್ಲಿ 48, ಮುಂಡಗೋಡ 2, ಹಳಿಯಾಳದಲ್ಲಿ 81, ಮತ್ತು ಜೋಯಿಡಾದಲ್ಲಿ 32 ಸೇರಿ ಒಟ್ಟು 600 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದರೊoದಿಗೆ ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 2,233ಕ್ಕೆ ಏರಿಕೆಯಾಗಿದೆ. 120 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 2113 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ. ಹೊನ್ನಾವರ 37, ಭಟ್ಕಳ 40, ಶಿರಸಿ 41, ಸಿದ್ದಾಪುರ 19, ಕಾರವಾರ 97, ಅಂಕೋಲಾ 40, ಕುಮಟಾ 45, ಯಲ್ಲಾಪುರ 31, ಮುಂಡಗೋಡ 23, ಹಳಿಯಾಳ 18, ಜೋಯ್ಡಾ 12 ಸೋಂಕಿತರು ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version