Follow Us On

Google News
Focus News
Trending

ಅಂಕೋಲಾದಲ್ಲಿ ಮತ್ತೊಂದು ಕರೊನಾ

ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಯಲ್ಲಿ ಸೋಂಕು

ಅಂಕೋಲಾ : ಜೂನ್ 17ರಂದು ತಾಲೂಕಿನ ಮಹಿಳೆಯೋರ್ವಳಲ್ಲಿ ಕೋವೀಡ್-19 ವೈರಸ್ ಧೃಡಪಟ್ಟು ಆಕೆಯನ್ನು ಕಾರವಾರದ ಕಿಮ್ಸ್ ಆಸ್ಪತ್ರೆಯ ಕೋವೀಡ್-19 ವಾರ್ಡಗೆ ದಾಖಲಿಸಲಾಗಿತ್ತು. ಈ ಘಟನೆಯಿಂದ ಜನತೆ ಬೆಚ್ಚಿಬಿದ್ದು ಆತಂಕಕ್ಕೆ ಒಳಗಾಗಿದ್ದರು. ಜೂನ್ 24ರಂದು ಸೋಂಕಿತ ಮಹಿಳೆ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಜನತೆಯ ನೆಂಮ್ಮದಿಗೆ ಕಾರಣವಾಗಿತ್ತು.
ಈಗ ತಾಲೂಕಿನಲ್ಲಿ ಮತ್ತೊಂದು ಹೊಸ ಪ್ರಕರಣ ದಾಖಲಾಗಲಿದೆ ಎನ್ನಲಾಗಿದೆ‌. ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ರೋಗಿಯೋರ್ವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬರುತ್ತಿವೆ ಎನ್ನಲಾಗಿದೆ‌. ಗಂಗಾವಳಿ ನದಿ ತೀರದಂಚಿನ ಗ್ರಾಮವೊಂದರ ವ್ಯಕ್ತಿಯೋರ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಆತನ ಕುಟುಂಬಸ್ಥರು ಮತ್ತು ಆಸ್ಪತ್ರೆ ಸೇರಿದಂತೆ ಇತರೆಡೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರ ಕ್ವಾರೆಂಟೈನ್ ಮತ್ತು ಗಂಟಲುದ್ರವದ ಪರೀಕ್ಷೆ ನಡೆಸಲು ಸಿದ್ಧತೆ ನಡೆದಿದೆ. ಇಂದಿನ ಆರೋಗ್ಯ ಇಲಾಖೆಯ ಬುಲೆಟಿನ್ ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬರುವ ಸಾಧ್ಯತೆಯಿದೆ ಎನ್ನಲಾಗಿದೆ.
-ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]

Back to top button
Idagunji Mahaganapati Chandavar Hanuman