Follow Us On

Google News
Focus News
Trending

ಹುಬ್ಬಳ್ಳಿ ಅಂಕೋಲಾ ರೈಲು ಹೋರಾಟದ ಕ್ರಿಯಾ ಸಮಿತಿಯಿಂದ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ : ಮನವಿ ಸಲ್ಲಿಕೆ

ಹುಬ್ಬಳ್ಳಿ ಅಂಕೋಲಾ ರೈಲು ಹೋರಾಟ ಕ್ರಿಯಾ ಸಮಿತಿ ಅಂಕೋಲಾ ಇವರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರರವರನ್ನು ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. . ಈ ಯೋಜನೆಯಿಂದ ಜೀವ ವೈವಿದ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿ ಸಮಗ್ರ ವರದಿ ಸಲ್ಲಿಸಲು ಹೈಕೋರ್ಟ್ ಉನ್ನತ ಸಮಿತಿ ರಚಿಸಿದ್ದು ಇದು ಸದ್ಯದಲ್ಲೇ ಯೋಜನಾ ವ್ಯಾಪ್ತಿಗೆ ಬಂದು ಜನಾಭಿಪ್ರಾಯ ಸಂಗ್ರಹ ಮಾಡಲಿರುವದರಿಂದ ಶಿವರಾಮ ಹೆಬ್ಬಾರರ ನೇತೃತ್ವದಲ್ಲಿ ಮುಂದಿನ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕೆಂದು ಕೋರಿದರು.

ಸಮಿತಿಯವರ ಮನವಿ ಸ್ವೀಕರಿಸಿದ ಶಿವರಾಮ ಹೆಬ್ಬಾರ ಮಾತನಾಡಿ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗಕ್ಕಾಗಿ ಅನೇಕ ವರ್ಷಗಳಿಂದ ಪಕ್ಷಾತೀತ ಹೋರಾಟಗಳು ನಡೆಯುತ್ತ ಬಂದಿದೆ, ಇದರಲ್ಲಿ ಪರಿಸರ ಹೋರಾಟಗಾರರ ಜೊತೆಯಲ್ಲಿ ಕೆಲ ತಾಂತ್ರಿಕ ಮತ್ತು ವೈಜ್ಞಾನಿಕ ಕಾರಣಗಳೂ ತೊಡಕಾದವು. ಈಗ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ನಮ್ಮದೇ ಸರಕಾರ ಇದೆ. ಮುಖ್ಯಮಂತ್ರಿಗಳೂ ಇದರ ಬಗ್ಗೆ ಆಸಕ್ತಿ ತೋರಿದ್ದಾರೆ. ಹೀಗಾಗಿ ಈಗ ಪೂರಕ ವಾತಾವರಣವಿದೆ ಸದ್ಯದಲ್ಲೇ ಒಂದು ನಿಯೋಗದೊಂದಿಗೆ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿಯವರೊಂದಿಗೆ ಸಮಾಲೋಚನೆ ನಡೆಸೋಣ, ಅಂತೆಯೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಜೊತೆಯೂ ಮಾತುಕತೆ ನಡೆಸಿ ಅವರ ಮೂಲಕ ಪ್ರಧಾನ ಮಂತ್ರಿಗಳಿಳಿ ಕೇಂದ್ರ ಮಟ್ಟದಲ್ಲಿ ಮನವರಿತೆ ಮಾಡಿ ಒತ್ತಡ ತರೋಣ ಎಂದರು. 

ಹುಬ್ಬಳ್ಳಿ ಅಂಕೋಲಾ ರೈಲು ಹೋರಾಟ ಕ್ರಿಯಾ ಸಮಿತಿಯ ಅಧ್ಯಕ್ಷ ರಮಾನಂದ ನಾಯಕ ಈ ವರೆಗೆ ಹೋರಾಟ ನಡೆದು ಬಂದ ದಾರಿಯನ್ನು  ವಿವರಸಿದರು. ಇತ್ತೀಚೆಗೆ ಪ್ರಧಾನ ಮಂತ್ರಿಗಳಿಗೂ ಈ ಕುರಿತು ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾರ ಭಾಸ್ಕರ ನಾರ್ವೇಕರ, ಹನುಮಂತ ಗೌಡ, ಆರ್.ಟಿ.ಮಿರಾಶಿ, ಜಗದೀಶ ನಾಯಕ, ಪದ್ಮನಾಭ ಪ್ರಭು, ಶಾಂತಾರಾಮ ನಾಯಕ ಹಿಚ್ಕಡ, ಗೋಪು ನಾಯಕ, ಗೋಪಾಲಕೃಷ್ಣ ನಾಯಕ, ರಾಜೇಂದ್ರ ಶೆಟ್ಟಿ, ಕೆ.ಎಚ್.ಗೌಡ, ವಿನೋದ ನಾಯಕ, ಗಣಪತಿ ಗಾಂವಕರ, ಉಮೇಶ ನಾಯ್ಕ, ನಾಗಾನಂದ ಬಂಟ, ಪಾಂಡುರಂಗ ಗೌಡ,ಅರುಣ ನಾಡಕರ್ಣಿ, ಶಾಂತಲಾ ನಾಡಕರ್ಣಿ, ಮಹಾಂತೇಶ ರೇವಡಿ, ಎಚ್ ಆರ್ ನಾಯಕ, ಸುರೇಶ್ ಆಸ್ಲಗದ್ದೆ, ಮಂಜುನಾಥ  ವಿ ನಾಯ್ಕ, ವಿಜು ಪಿಳ್ಳೆ, ಭಾರ್ಗವ, ಬಿಂದೇಶ ನಾಯಕ, ದಾಮೋದರ ರಾಯ್ಕರ, ಪಾಂಡು ಗೌಡ ಭಾವಿಕೇರಿ, ರಾಜು ಮತ್ತಿತರರಿದ್ದರು .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button