ನಕಲಿ ಬಂಗಾರದ ಸರ ನೀಡಿ, ಅಸಲಿ ಎಂದು ನಂಬಿಸಿ ಹಣ ವಂಚನೆ: ವ್ಯಕ್ತಿಯಿಂದ ದೂರು ದಾಖಲು

ಸಿದ್ದಾಪುರ: ಮೂರು ಲಕ್ಷ ರೂಪಾಯಿ ಬಂಗಾರದ ಹಾರವನ್ನು 3 ಸಾವಿರ ರೂ.ಗೆ ನೀಡುವುದಾಗಿ ಹೇಳಿ ನಕಲಿ ಬಂಗಾರದ ಸರ ತೋರಿಸಿ ವಂಚಿಸಿರುವ ಬಗ್ಗೆ ವ್ಯಕ್ತಿಯೊಬ್ಬರು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಾಲೂಕಿನ ತ್ಯಾರ್ಸಿ ಗ್ರಾಮದ ಶಿವಪ್ಪ ಸೀತಾರಾಮ್ ಗೊಂಡ ದೂರು ಸಲ್ಲಿಸಿದ ವ್ಯಕ್ತಿ. ಹೊಸೂರಿನ ಪ್ರದೀಪ್ ಅಲಿಯಾಸ್ ಪದ್ದಿ ಮರಿಯಪ್ಪ ನಾಯಕ ವಂಚಿಸಿದ ಆರೋಪಿ.

ಕಳೆದ ಡಿಸೆಂಬರ್ 12ರಂದು ಆರೋಪಿತನು ಸೊರಬ ರಸ್ತೆಯ ಸಾಯಿನಗರ ಕ್ರಾಸ್‌ನಲ್ಲಿ ತಮ್ಮಿಂದ 3000 ರೂ. ಹಣ ಪಡೆದು ನಕಲಿ ಸರನೀಡಿದ್ದಲ್ಲದೆ, ಇಲ್ಲಿನ ಚಿಕನ್ ಶಾಪ್ನವರಿಗೆ ಫೋನ್ ಪೇ ಮುಖಾಂತರ ಹಣ ಸಂದಾಯ ಮಾಡಿಸಿಕೊಂಡಿದ್ದು, ಒಟ್ಟು 6500 ರೂ. ವಂಚಿಸಿದ್ದಾಗಿ ತಿಳಿಸಿದ್ದಾರೆ. ಜನವರಿ 20 ರಂದು ಬಂಗಾರದ ಸರವನ್ನು ಸಿದ್ದಾಪುರದ ಬಂಗಾರದ ಅಂಗಡಿಯಲ್ಲಿ ತೋರಿಸಿದಾಗ ಅದು ನಕಲಿ ಎಂಬುದು ತಿಳಿದು ಬಂದಿದ್ದು, ದೂರು ದಾಖಲಿಸಿದ್ದಾನೆ.

ವಿಸ್ಮಯ ನ್ಯೂಸ್, ಸಿದ್ದಾಪುರ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ: ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ

Exit mobile version