ಉತ್ತರಕನ್ನಡದ ಜನರಿಗೆ ಸಮಾಧಾನಕರ ಸುದ್ದಿ: ಇಳಿಮುಖವಾದ ಸೋಂಕು: ಗುಣಮುಖರಾದವರು ಹೆಚ್ಚಳ

ಕಾರವಾರ : ಉತ್ತರಕನ್ನಡದಲ್ಲಿ ಇಂದು 352 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.ಇಂದು ಪಾಸಿಟಿವ್ ಬಂದವಿರಿಗಿಂತ ಕೋವಿಡ್ ಗೆದ್ದವರೇ ಹೆಚ್ಚು ಎಂಬುದು ಸಮಾಧಾನಕರ ಸಂಗತಿ.

ಕುಮಟಾದಲ್ಲಿ 66, ಕಾರವಾರದಲ್ಲಿ 13, ಅಂಕೋಲಾದಲ್ಲಿ 5, ಹೊನ್ನಾವರ 61, ಭಟ್ಕಳದಲ್ಲಿ 7, ಶಿರಸಿಯಲ್ಲಿ 68, ಸಿದ್ದಾಪುರದಲ್ಲಿ 24, ಯಲ್ಲಾಪುರದಲ್ಲಿ 24, ಮುಂಡಗೋಡ 47, ಹಳಿಯಾಳದಲ್ಲಿ 9 ಹಾಗು ಜೋಯಿಡಾದಲ್ಲಿ 11, ಒಟ್ಟು 352 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೇ ವೇಳೆ 450 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ‌.

ವಿಸ್ಮಯ ನ್ಯೂಸ್ ಕಾರವಾರ

Exit mobile version