ಕಾರವಾರ: ಉತ್ತರಕನ್ನಡದಲ್ಲಿ ಇಂದು 699 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕಾರವಾರದಲ್ಲಿ ಒಂದು ಸಾವು ಸಂಭವಿಸಿದೆ.
ಕಾರವಾರದಲ್ಲಿ 100, , ಭಟ್ಕಳದಲ್ಲಿ 44,ಅಂಕೋಲಾದಲ್ಲಿ 29, ಕುಮಟಾದಲ್ಲಿ 52, ಹೊನ್ನಾವರ 45, ಶಿರಸಿಯಲ್ಲಿ 75, ಸಿದ್ದಾಪುರದಲ್ಲಿ 50, ಯಲ್ಲಾಪುರದಲ್ಲಿ 123, ಮುಂಡಗೋಡ 44 ಹಳಿಯಾಳದಲ್ಲಿ 108 ಹಾಗು ಜೋಯಿಡಾದಲ್ಲಿ 29 ಸೇರಿ ಒಟ್ಟು 699 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇದರೊಂದಿಗೆ ಸಕ್ರೀಯ ಸೋಂಕಿತರ ಸಂಖ್ಯೆ 2824ಕ್ಕೆ ಏರಿಕೆಯಾಗಿದೆ. 95 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 2729 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.
ಅಂಕೋಲಾ: ತಾಲೂಕಿನಲ್ಲಿ ಸೋಮವಾರ 30 ಜನರಲ್ಲಿ ಕೋವಿಡ್ ಸೋಂಕು ದೃಡಪಟ್ಟಿದ್ದು ಇತ್ತೀಚೆಗೆ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದರಿಂದ ಆತಂಕದಲ್ಲಿದ್ದ ಜನರಲ್ಲಿ ಕೊಂಚ ನೆಮ್ಮದಿಗೆ ಕಾರಣವಾಗಿದ್ದು 45 ಜನರು ಸೋಂಕಿನಿಂದ ಗುಣಮಮಖರಾಗಿದ್ದಾರೆ.
ತಾಲೂಕಿನಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, 196 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಇವರಲ್ಲಿ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಉಳಿದ 194 ಜನರು ಹೋಮ್ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಸ್ಮಯ ನ್ಯೂಸ್ ಕಾರವಾರ