ಸ್ಪೋಟಕ್ಕಾಗಿ ಬಳಸುತ್ತಿದ್ದ 250 ಕೆಜಿಗೂ ಅಧಿಕ ಜಿಲೆಟಿನ್ ವಶಕ್ಕೆ

ಕಾರವಾರ: ಸುಮಾರು 250 ಕೆಜಿಗೂ ಅಧಿಕ ಜಿಲೆಟಿನ್ ಅನ್ನು ಜೆಸಿಬಿಯಲ್ಲಿ ಸಾಗಾಟ ಮಾಡಲಾಗುತ್ತಿದ್ದು, ಮಾಹಿತಿ ಪಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯವರು ವಶಕ್ಕೆ ಪಡೆದಿದ್ದಾರೆ. ಚತುಷ್ಪತ ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ಕಲ್ಲುಗಳನ್ನು ಸ್ಫೋಟಗೊಳಿಸಲು ಅಜಾಗರೂಕತೆಯಿಂದ ಜಿಲೆಟಿನ್ ನನ್ನು‌ ಸಾಗಿಸಲಾಗುತ್ತಿತ್ತು.

ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳದೇ ಪ್ರತ್ಯೇಕ ವಾಹನದಲ್ಲಿ ಸಾಗಾಟ ಮಾಡದೇ ಜೆಸಿಬಿಯಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಒಂದು ವೇಳೆ ಸ್ಪೋಟಗೊಂಡಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.

ವಿಸ್ಮಯ ನ್ಯೂಸ್ ಕಾರವಾರ

Exit mobile version