ಶಾಲಾ ವಿದ್ಯಾರ್ಥಿಗಳಿಗೆ ಭಾವಗೀತೆ ಮತ್ತು ಭಾಷಣ ಸ್ಪರ್ಧೆ

ಕುಮಟಾ: ಜುಲೈ 1ರಂದು ನಡೆಯಲಿರುವ ಪತ್ರಿಕಾ ದಿನಾಚರಣೆಯ ನಿಮಿತ್ತ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ ಘಟಕದಿಂದ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಭಾವಗೀತೆ ಮತ್ತು ಭಾಷಣೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಕೊರೊನಾ ತೊಡಕಿನ ಕಾರಣ ಸ್ಪರ್ಧೆಯನ್ನು ವಾಟ್ಸ್‍ಅಪ್ ಮೂಲಕ ಹಮ್ಮಿಕೊಳ್ಳಲಾಗಿದ್ದು, 4ರಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಭಾವಗೀತೆ ಸ್ಪರ್ಧೆ ಮತ್ತು 8ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ “ಕೊರೊನಾ ; ಈ ವರ್ಷ ಶಾಲೆ ಬೇಕೆ.? ಬೇಡವೇ..? ಎಂಬ ವಿಷಯದ ಮೇಲೆ ಭಾಷಣ ಸ್ಪರ್ಧೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ಭಾವಗೀತೆ ಅಥವಾ ಭಾಷಣದ 3 ನಿಮೀಷದ ವಿಡಿಯೋ ಮಾಡಿ ವಾಟ್ಸ್‍ಅಪ್ ನಂಬರ್‍ಗೆ ಕಳುಹಿಸಿಕೊಡಬೇಕು. ಸ್ಪರ್ಧೆ ಜೂನ್ 23ರಿಂದ ಆರಂಭವಾಗಿದ್ದು, ಕೊನೆಯ ದಿನವಾದ ಜೂನ್ 28ರೊಳಗೆ ಸ್ಪರ್ಧಾಳುಗಳು ತಮ್ಮ ವಿಡಿಯೋವನ್ನು ಅಮರ ಭಟ್ ಮೊ. 9742984712 ಮತ್ತು ಸಂತೋಷ ನಾಯ್ಕ ಮೊ. 9738949070 ಗೆ ರವಾನಿಸಬೇಕು. ಸ್ಪರ್ಧಿಗಳು ತಮ್ಮ ಪೂರ್ಣ ಹೆಸರು, ಶಾಲೆ ಮತ್ತು ತರಗತಿಯ ಬಗ್ಗೆ ಸ್ಪಷ್ಟವಾಗಿ ನಮೂದಿಸಿ, ವಾಟ್ಸ್‍ಅಪ್ ಮಾಡಬೇಕು. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನದ ಜೊತೆಗೆ ಎರಡು ಸಮಾಧಾನಕರ ಬಹುಮಾನ ನೀಡಲಾಗುವುದು. ನಿರ್ಣಾಯಕರ ತೀರ್ಮಾನವೇ ಅಂತೀಮ. ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರನ್ನು ಜೂನ್ 30ರಂದು ಬಿಡುಗಡೆ ಮಾಡಲಾಗುವುದು.

ಜುಲೈ 1ರಂದು ರೋಟರಿ ಕ್ಲಬ್‍ನ ನಾದಶ್ರೀ ಕಲಾ ಕೇಂದ್ರದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

Exit mobile version