ಕೆವೈಸಿ ಮಾಡುವುದಾಗಿ ನಂಬಿಸಿ ಮಹಿಳೆಗೆ ಮೋಸ: ಖಾತೆಯಿಂದ 83 ಸಾವಿರ ರೂಪಾಯಿ ಎಗರಿಸಿದ ದುಷ್ಕರ್ಮಿ

ಶಿರಸಿ: ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರದ ಅಧಿಕಾರಿ ಎಂದು ನಂಬಿಸಿ, ಆರ್‌ಡಿ ಖಾತೆಯ ಕೆವೈಸಿ ಪಡೆದು ಶಿರಸಿಯ ಮಹಿಳೆಯೋರ್ವಳಿಂದ ಅಪರಿಚಿತ ವ್ಯಕ್ತಿಯು 83 ಸಾವಿರ ರೂಪಾಯಿ ದೋಚಿದ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿರಸಿಯ ಸಂಧ್ಯಾ ಕಿಣಿ ಎನ್ನುವವರು ವಂಚನೆಗೊಳಗಾದ ಮಹಿಳೆ ಎಂದು ತಿಳಿದುಬಂದಿದೆ. 24 ಗಂಟೆಯೊಳಗೆ ನಿಮ್ಮ ಕೆನರಾ ಬ್ಯಾಂಕ್ ಖಾತೆಯ ಕೆವೈಸಿ ಮಾಡಿಸಿ, ಇಲ್ಲವಾದರೆ ಖಾತೆಯನ್ನು ಬ್ಲಾಕ್ ಮಾಡಲಾಗುವುದು. ಕೂಡಲೇ ಗ್ರಾಹಕರ ಸೇವಾ ಕೇಂದ್ರದ ಸಂಖ್ಯೆಕ್ಕೆ ಸಂಪರ್ಕಿಸಿ ಎಂದು ಸಂಧ್ಯಾ ಅವರಿಗೆ ಮೆಸೇಜ್ ಬಂದಿದೆ.

ಇವರು ಗ್ರಾಹಕರ ಸೇವಾ ಕೇಂದ್ರದ ಸಂಖ್ಯೆಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಉತ್ತರಿಸಿ, ತಾನು ಗ್ರಾಹಕ ಸೇವಾ ಕೇಂದ್ರದ ಅಧಿಕಾರಿ ಎಂದು ಪರಿಚಯಿಸಿಕೊಂಡು, ಕೆವೈಸಿ ಅಪ್ಡೇಟ್ ಮಾಡುವುದಾಗಿ ತಿಳಿಸಿ, ಎಟಿಎಂ ಕಾರ್ಡ್ ನಂಬರ್ ಹಾಗೂ ಓಟಿಪಿ ಪಡೆದುಕೊಳ್ಳುತ್ತಾನೆ. ತಕ್ಷಣವೇ, ನನ್ನ ಖಾತೆಯಿಂದ 50 ಸಾವಿರ ಹಾಗೂ 33 ಸಾವಿರದಂತೆ ಎರಡು ಬಾರಿ ಒಟ್ಟೂ 83 ಸಾವಿರ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡು ವಂಚನೆ ಮಾಡಿದ ಬಗ್ಗೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಸಂಧ್ಯಾ ಕಿಣಿ ದೂರು ದಾಖಲಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ: ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ

Exit mobile version