ಪುರಸಭೆ ಮಾಜಿ ಅಧ್ಯಕ್ಷ ಮತ್ತು ಕಬ್ಬಡಿಪಟು ರೋಹಿದಾಸ ನಾಯ್ಕ ಅನಾರೋಗ್ಯದಿಂದ ನಿಧನ

ಕುಮಟಾ: ಪಟ್ಟಣದ ದೇವರಹಕ್ಕಲನ ನಿವಾಸಿ ಪುರಸಭೆ ಮಾಜಿ ಅಧ್ಯಕ್ಷ ಮತ್ತು ಕಬ್ಬಡಿಪಟು ರೋಹಿದಾಸ ನಾಯ್ಕ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾದರು. ರೋಹಿದಾಸ ನಾಯ್ಕ ಅವರು ಮಾಜಿ ಶಾಸಕ ದಿ. ಮೋಹನ ಕೆ ಶೆಟ್ಟಿ ಅವರ ಕಾಲದಲ್ಲಿ ಕಾಂಗ್ರೆಸ್ ಪ್ರಭಾವಿ ಮುಖಂಡರಾಗಿದ್ದರು.

ಕುಮಟಾ ಪುರಸಭೆಯ ಅಧ್ಯಕ್ಷರಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ಕುಮಟಾ ಅರ್ಬನ್
ಬ್ಯಾಂಕ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಆರೋಗ್ಯ ತೀರಾ ಹದಗೆಟ್ಟ ಪರಿಣಾಮ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ನಿಧನರಾದರು.

ವಿಸ್ಮಯ ನ್ಯೂಸ್ ಕುಮಾ

Exit mobile version