Important
Trending

ಮನೆಗೆ ಮರಳಿ ಬಾರದ ವಿವಾಹಿತ ಮಹಿಳೆ: ಸಭೆಗೆ ಹೋದ ಪುಟ್ಟ ಮಗುವಿನ ತಾಯಿ ಹೋದದ್ದಾದರೂ ಎಲ್ಲಿ?

ಅಂಕೋಲಾ: ಸ್ವ ಸಹಾಯ ಸಂಘದ ಸಭೆಗೆ ಹೋಗಿ ಬರುವುದಾಗಿ ತೆರಳಿದ ಮಹಿಳೆಯೋರ್ವಳು ಮನೆಗೆ ಮರಳದೇ ನಾಪತ್ತೆ ಆಗಿರುವ ಘಟನೆ ತಾಲೂಕಿನ ಮಂಜಗುಣಿ ವ್ಯಾಪ್ತಿಯ ಸಿಂಗನಮಕ್ಕಿಯಲ್ಲಿ ನಡೆದಿದೆ.

ಸಿಂಗನಮಕ್ಕಿಯ (30 ) ರ ವಿವಾಹಿತ ಮಹಿಳೆಯೇ ನಾಪತ್ತೆ (ಕಾಣೆ ) ಯಾದವಳಾಗಿದ್ದು, ಇವಳಿಗೆ ಪುಟ್ಟ ಮಗುವೂ ಒಂದಿದೆ ಎನ್ನಲಾಗಿದೆ. ಫೆಬ್ರವರಿ 3 ರಂದು ಧರ್ಮಸ್ಥಳ ಸ್ಪ ಸಹಾಯ ಸಂಘದ ಸಭೆಗೆ ಹೋಗಿ ಬರುವುದಾಗಿ ತೆರಳಿದ ಈಕೆ ಮನೆಗೆ ಮರಳಿ ಬಂದಿಲ್ಲ ಎಂದು ಆಕೆಯ ಸಹೋದರ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ತನ್ನ ಸಹೋದರಿಯನ್ನು ಹುಡುಕಿಕೊಡುವಂತೆ ಕೋರಿಕೊಂಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಜಿಲ್ಲೆಯ ಶಿರಸಿ ಮತ್ತಿತರೆಡೆ ದಿನದಿಂದ ದಿನಕ್ಕೆ ಮಹಿಳೆಯರ ನಾಪತ್ತೆ ಹಾಗೂ ಇನ್ನಿತರ ಕೆಲ ಪ್ರಕರಣಗಳು, ಹೆಚ್ಚುತ್ತಲೇ ಇದ್ದು,ಅಂಕೋಲಾದಲ್ಲಿಯೂ ಇಂತಹ ಪ್ರಕರಣ ಕೇಳಿ ಬರುತ್ತಿರುವುದಕ್ಕೆ ಕೆಲ ಪ್ರಜ್ಞಾವಂತರು ಆತಂಕ ವ್ಯಕ್ತಪಡಿಸಿದ್ದಾರೆ. ಅನ್ಯ ಆಕರ್ಷಣೆಯೂ ಇಂತಹ ಘಟನೆಗಳು ನಡೆಯಲು ಕಾರಣ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬಂದಂತಿದೆ,

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button