Important
Trending

ರಸ್ತೆಯಲ್ಲಿ ಸಿಕ್ಕಿದ್ದ ಪರ್ಸ್: ಹಣ, ದಾಖಲೆ ಮರಳಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

ಸಿದ್ದಾಪುರ: ರಸ್ತೆಯಲ್ಲಿ ಸಿಕ್ಕಿದ ಹಣ ದಾಖಲೆ ಒಳಗೊಂಡ ಪರ್ಸ್ ಅನ್ನು ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯ ನಂದನ್ ಬೋರ್ಕರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸಂಜೆ ಮಾರುಕಟ್ಟೆ ಕಡೆಯಿಂದ ಮನೆ ಕಡೆಗೆ ಹೋಗುತ್ತಿರುವಾಗ ಹಾಳದಕಟ್ಟ ಬಳಿ ಬುಲೆಟ್ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಜೇಬಿನಿಂದ ಪರ್ಸ್ ಬಿದ್ದಿದ್ದು, ಅದರಲ್ಲಿ ಹಣ ಹಾಗೂ ಅಗತ್ಯ ದಾಖಲೆಗಳು ಇದ್ದವು.

ಅದು ಸೊರಬ ಮೂಲದ ಉದ್ರಿ ಗ್ರಾಮದ ಸುಮಂತ ಕುಮಾರ ಗೌಡ ಎನ್ನುವವರಿಗೆ ಸಂಬoಧ ಪಟ್ಟಿರುವುದಾಗಿದ್ದವು. ನಂತರ ನಂದನ್ ರವರು ಸೊರಬದ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಸುಮಂತ ಅವರ ನಂಬರ್ ಪಡೆದು, ವಿಷಯ ತಿಳಿಸಿ ನನಗೆ ನಿಮ್ಮ ಪರ್ಸ್ ಸಿಕ್ಕಿದೆ ಬಂದು ಪಡೆಯಿರಿ ಎಂದು ತಿಳಿಸಿದರು. ಬೆಳಿಗ್ಗೆ ಸಿದ್ದಾಪುರ ಠಾಣೆಯಲ್ಲಿ ಪರ್ಸ್ ನಲ್ಲಿದ್ದ 3500 ರೂ ನಗದು ಮತ್ತು ದಾಖಲೆಗಳನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಪಿ ಎಸ್ ಐ ಅನಿಲ್ ರವರ ಸಮಕ್ಷಮ ಹಿಂದುರುಗಿಸಿ ಪ್ರಾಮಾಣಿಕತೆ ಮೆರೆದು ಮೆಚ್ಚುಗೆ ಪಡೆದರು. ಪಿ ಎಸ್ ಐ ಸೇರಿದಂತೆ ಠಾಣೆಯ ಅಧಿಕಾರಿಗಳು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button