Follow Us On

WhatsApp Group
Important
Trending

ಬೈಕ್ ಸುಟ್ಟು ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಶಿರಸಿ: ಬೈಕ್ ಸುಟ್ಟು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಶಿರಸಿ ಪೋಲೀಸರು ಯಶಸ್ವಿಯಾಗಿದ್ದಾರೆ. ಶಿರಸಿ ಕಸ್ತೂರಬಾ ನಗರದ ಸರ್ಪರಾಜ್ ಯಾನೆ ಶಾರು ಸಮೀರ್ ಖಾನ್ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಮೂರು ತಿಂಗಳ ಹಿಂದೆ ರಿತಿಕಾ ಕಿಣಿ ಎನ್ನುವವರ ಮನೆಗೆ ಅಕ್ರಮವಾಗಿ ನುಗ್ಗಿದ್ದ ಈತ ಬೈಕ್ ಸುಟ್ಟು ತಲೆಮರೆಸಿಕೊಂಡಿದ್ದ. ಡಿವೈಎಸ್ಪಿ ಗಣೇಶ ಕೆ,ಎಲ್. ಅವರ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸೈ ನಾಗಪ್ಪ, ಎಎಸೈ ಅಶೋಕ್ ರಾಥೋಡ್ ಹಾಗೂ ಇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Back to top button