Follow Us On

WhatsApp Group
Important
Trending

ನರ್ಸಿಂಗ್ ಹೋಂ ನಲ್ಲಿ ಸೇವೆಯಲ್ಲಿ ಇರುವಾಗಲೇ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಕೀರ್ತನಕಾರ

ಕುಮಟಾ: ಖ್ಯಾತ ಕೀರ್ತನಕಾರ ಹಾಗೂ ಲ್ಯಾಬ್ ಟೆಕ್ನಿಷಿಯನ್ ಕುಮಟಾ ತಾಲೂಕಿನ ಊರಕೇರಿ ನಿವಾಸಿ ದತ್ತಾತ್ರೇಯ ನಾಯ್ಕ, ಸೇವೆಯಲ್ಲಿರುವಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ದತ್ತಾತ್ರೇಯ ನಾಯ್ಕ, ಜನಮೆಚ್ಚುಗೆಯ ಕೀರ್ತನೆಕಾರರು ಆಗಿದ್ದರು. ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೂ ಹೋಗಿ ಹರಿಕಥೆ ಮಾಡುವ ಮೂಲಕ ಜನಪ್ರಿಯತೆ ಪಡೆದಿದ್ದರು. ಇವರು ಕಳೆದ ಸುಮಾರು 20 ವರ್ಷದಿಂದ ಹೊನ್ನಾವರ ಕರ್ಕಿಯ ಶಾರದಾ ನರ್ಸಿಂಗ್ ಹೋಂ ನಲ್ಲಿ “ಲ್ಯಾಬ್ ಟೆಕ್ನಿಷಿಯನ್” ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನರ್ಸಿಂಗ್ ಹೋಂ ನಲ್ಲಿ ಸೇವೆಯಲ್ಲಿ ಇರುವಾಗಲೇ ಕುಸಿದು ಬಿದ್ದಿದ್ದಾರೆ.

ತಕ್ಷಣ ಅವರನ್ನ ಆಸ್ಪತ್ರೆಯ ವಾರ್ಡ್ ಗೆ ಸೇರಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ಓರ್ವ ಪುತ್ರ, ಪತ್ನಿ ಹಾಗೂ ಬಂಧು ಬಳಗ ಸೇರಿದಂತೆ ಅಪಾರ ಅಭಿಮಾನಿಗಳನ್ನ ಅಗಲಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button