Focus News
Trending

ಗಮನಸೆಳೆದ ಜಾನುವಾರು ಪ್ರದರ್ಶನ: ಉಚಿತ ಜಾನುವಾರು ಚಿಕಿತ್ಸಾ ಶಿಬಿರ

ಕುಮಟಾ: ಜಿಲ್ಲಾಪಂಚಾಯತ ಉತ್ತರ ಕನ್ನಡ, ತಾಲೂಕಾ ಪಂಚಾಯತ ಕುಮಟಾ, ಗ್ರಾಮ ಪಂಚಾಯತ ಹೊಲನಗದ್ದೆ, ಪಶುಸಂಗೋಪನಾ ಇಲಾಖೆ ಕುಮಟಾ, ಪ್ರೋತ್ಸಾಹಿ ಯುವ ಬಳಗ ಹಳಕಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಳಕಾರ ಹಾಗೂ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ‘ ಜಾನುವಾರು ಪ್ರದರ್ಶನ ‘ ಮತ್ತು ಉಚಿತ ಜಾನುವಾರು ಚಿಕಿತ್ಸಾ ಶಿಬಿರ ‘ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಊರಿನ ಗ್ರಾಮಸ್ಥರು ತಂದoತಹ ವಿವಿಧ ತಳಿಯ ಜಾನುವಾರುಗಳನ್ನು ಪ್ರದರ್ಶನಕ್ಕೆ ಇಡಲಾಯಿತು.

ಮೊದಲಿಗೆ ಹೊಲನಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಎಮ್.ಎಮ್. ಹೆಗಡೆಯವರಿಂದ ಜಾನುವಾರು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಲಾಯಿತು. ಹಾಗೆಯೇ ಗಣ್ಯರಿಂದ ಹಾಗೂ ಊರಿನವರಿಂದ ಜಾನುವಾರು ಪ್ರದರ್ಶನದ ವೀಕ್ಷಣೆ ಮಾಡಲಾಯಿತು. ನಂತರ ಗಣ್ಯರಿಂದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕುಮಟಾದ ಮುಖ್ಯ ಪಶವೈದ್ಯಾಧಿಕಾರಿಗಳಾದ ವಿ.ಕೆ. ಹೆಗಡೆಯವರು ಜಾನುವಾರುಗಳನ್ನು ತಂದು ಪ್ರದರ್ಶನ ಜಾಗದಲ್ಲಿ ತಂದು ಕಟ್ಟಬೇಕೆಂದರೆ ಹರಸಾಹಸವೇ ಮಾಡಬೇಕಾಗುತ್ತದೆ. ನಾವು ಕುಮಟಾ ತಾಲೂಕಿನ ಕಾರ್ಯಕ್ರಮವನ್ನು ಹಳಕಾರಿನಲ್ಲಿ ಇಟ್ಟುಕೊಳ್ಳಲು ಕಾರಣವೇನೆಂದರೆ ನೂರಕ್ಕು ಹೆಚ್ಚಿನ ಜಾನುವಾರುಗಳು ಇರುವುದರಿಂದ ಇಲ್ಲಿಯೇ ಜಾನುವಾರು ಪ್ರದರ್ಶನ ಮತ್ತು ಉಚಿತ ಜಾನುವಾರು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಎಮ್.ಎಮ್.ಹೆಗಡೆಯವರು ಮಾತನಾಡಿ ಗೋವನ್ನು ಮುಕ್ಕೋಟಿ ದೇವರಾಗಿ ನಾವು ಪೂಜಿಸುತ್ತೇವೆ. ಅದರಲ್ಲಿಯೂ ದೀಪಾವಳಿಯ ಸಂಧರ್ಭದಲ್ಲಿ ಬಹಳ ವಿಜ್ರಂಭಣೆಯಿoದ ಗೋವುಗಳನ್ನ ಅಲಂಕರಿಸಿ ಪೂಜಿಸುವಂತ ಸಂಪ್ರದಾಯ ಅನಾದಿಕಾಲದಿಂದಲು ನಡೆದುಕೊಂಡು ಬಂದಿದೆ. ಆದರೆ ಇಂದು ಗೋವನ್ನು ಸಾಕುವ ವಿಚಾರದಲ್ಲಿ ಒಂದೆ ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲರೂ ಕೂಡ ಗೋವುಗಳನ್ನು ಬಹಳ ಪ್ರೀತಿಯಿಂದ ಸಾಕುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರಿತಿಯ ಸಮಸ್ಯೆಗಳು ಉಂಟಾಗುತ್ತಿದೆ. ಆದರೆ ರೈತನ ಬೆನ್ನೆಲುಬಾಗಿರುವಂತಹದ್ದು ಗೋವುಗಳು ಮಾತ್ರ ಎಂದರು.

ನಂತರ ಜಾನುವಾರು ಪ್ರದರ್ಶನದಲ್ಲಿ ಗೆಲುವು ಸಾಧಿಸಿದ ಜಾನುವಾರುಗಳಿಗೆ ಬಹುಮಾನ ವಿತರಿಸಲಾಯಿತು. ಬಹುಮಾನವನ್ನು ಜಾನುವಾರುಗಳ ಮಾಲಿಕರು ಗಣ್ಯರಿಂದ ಪಡೆದುಕೊಂಡರು. ಕೊನೆಯಲ್ಲಿ ಲಘು ಉಪಹಾರದ ಮೂಲಕ ಕಾರ್ಯಕ್ರಮ ಕೊನೆಗೊಂಡಿತು. ಒಟ್ಟಿನಲ್ಲಿ ಜಾನುವಾರುಗಳ ರಕ್ಷಣೆಗೋಸ್ಕರ ಮಾಡಿದಂತಹ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಎಲ್ಲಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿ ಜನರಲ್ಲಿ ಜಾನುವಾರುಗಳ ಅನಾರೋಗ್ಯದ ಕಾರಣ ಬಗ್ಗೆ, ಅನಾರೋಗ್ಯದ ನಿವಾರಣೆಗೆ ಹಾಗೂ ರಕ್ಷಣೆಗೆ, ಜನರಲ್ಲಿ ಜಾಗ್ರತಿ ಮೂಡಿಸುವಂತಾಗಲಿ ಎನ್ನುವುದು ನಮ್ಮೆಲ್ಲರ ಆಶಯ.

ವಿಸ್ಮಯ ನ್ಯೂಸ್, ಕುಮಟಾ

Back to top button