Follow Us On

WhatsApp Group
Important
Trending

ಗೋಕರ್ಣ ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆ ನಾಪತ್ತೆ: ನೇಚರ್ ಕ್ಯಾಂಪಸ್ ನಿಂದ ಹೊರಹೋದವಳು ವಾಪಸ್ ಬಂದಿಲ್ಲ

ಗೋಕರ್ಣ: ವಿಶ್ವಪ್ರಸಿದ್ಧ ಪ್ರವಾಸಿತಾಣವಾದ ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಜಪಾನ್ ಮೂಲದ ಮಹಿಳೆ ತನ್ನ ಪತಿಯೊಂದಿಗೆ ಬಂಗ್ಲೆಗುಡ್ಡದ ನೇಚರ್ ಕ್ಯಾಂಪಸ್‌ನಲ್ಲಿ ತಂಗಿದ್ದರು. ಮುಂಜಾನೆ ನೇಚರ್ ಕ್ಯಾಂಪಸ್‌ನಿoದ ಹೊರಹೋಗಿದ್ದ ಮಹಿಳೆ, ಮರಳಿ ಬಂದಿಲ್ಲ. ಈ ಕುರಿತು ಮಹಿಳೆಯ ಪತಿ ದೈ ಯಮಾಝಕಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು , ಹಲವು ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್, ಗೋಕರ್ಣ

Back to top button