ಎರಡು ದಿನದ ಹಿಂದೆ ನಾಪತ್ತೆಯಾದ ವ್ಯಕ್ತಿ ನದಿಯಲ್ಲಿ ಶವವಾಗಿ ಪತ್ತೆ

ಭಟ್ಕಳ: ಕಳೆದ ಎರಡು ದಿನಗಳಿಂದ ಮನೆಯಿಂದ ಹೋದ ವ್ಯಕ್ತಿ ಇಂದು ತಾಲೂಕಿನ ವೆಂಕ್ಟಾಪುರ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿ ವೆಂಕಟರಮಣ ಶನಿಯಾರ ಮೊಗೇರ(66) ಸಣಬಾವಿ ಬೆಂಗ್ರೆ 1 ಎಂದು ತಿಳಿದು ಬಂದಿದೆ. ಇವರು ಗುರುವಾರ ಸಂಜೆ ಮನೆಯಿಂದ ಹೋದ ವ್ಯಕ್ತಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಶಿರಾಲಿ ಚೆಕ್ ಸಮೀಪ ನಡೆದುಕೊಂಡು ಹೋಗಿರುದನ್ನು ನೋಡಿದ್ದು. ಇಂದು ತಾಲೂಕಿನ ವೆಂಕ್ಟಾಪುರ ನದಿಯಲ್ಲಿ ಶವ ತೇಲುತ್ತಿರುದ್ದನು ಗಮನನಿಸಿದ ದಾರಿ ಹೋಕನೊರ್ವ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಗ್ರಾಮೀಣ ಠಾಣಾ ಪೊಲೀಸರು ಮೀನುಗಾರರ ಸಹಾಯದದಿಂದ ಶವವನ್ನು ದಡಕ್ಕೆ ತಂದು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
ಈ ಕುರಿತು ಗ್ರಾಮೀಣ ಠಾಣೆ ಮೃತ ವ್ಯಕ್ತಿಯ ಮಗ ದೂರು ದಾಖಲಿಸಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

[sliders_pack id=”1487″]
Exit mobile version