ಪರಿಸರ ಜಾಗ್ರತಿ ಉಪನ್ಯಾಸ ಕಾರ್ಯಕ್ರಮ; ಪರಿಸರ ಅಸಮತೋಲನಗೆ ಮಾನವನ ದುರಾಶೆಯೇ ಕಾರಣ

ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ದಿನಾಂಕ:11/02/2022 ರಂದು ವಿಜ್ಞಾನ ಸಂಘ ಮತ್ತು ಇಕೋ ಕ್ಲಬ್ಬಿನ ಅಡಿಯಲ್ಲಿ ಹಮ್ಮಿಕೊಂಡ ಪರಿಸರ ಜಾಗೃತಿ ಉಪನ್ಯಾಸ ಕಾರ್ಯಕ್ರಮವು ಇಂದು ನಡೆಯಿತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಎಂ ಎಚ್ ಭಟ್ಟ ಪ್ರಾಂಶುಪಾಲರು ಪದವಿ ಪೂರ್ವ ವಿಭಾಗ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯ ಹೊನ್ನಾವರ ಇವರು ಉಪಸ್ಥಿತರಿದ್ದು ಪರಿಸರ ಜಾಗ್ರತಿಯ ಕುರಿತು ಮಾತನಾಡಿ ಪರಿಸರದ ಅಸಮತೋಲನಗೆ ಮಾನವನ ದುರಾಶೆಯೇ ಕಾರಣ ಎಂದು ಹೇಳಿ ಮನುಷ್ಯನ ಕೃತ್ಯದಿಂದ ಉಂಟಾಗುವ ಪರಿಸರ ಮಾಲಿನ್ಯದ ವಿವಿಧ ಪ್ರಕಾರಗಳು ಮತ್ತು ವಿಕಿರಣದ ಪರಿಣಾಮದಿಂದ ಆಗುವ ಓರೆಮಾನ ನಾಶದ ಕುರಿತು ವೈಜ್ಞಾನಿಕವಾಗಿ ತಿಳಿಸಿ ಅದರ ಪರಿಣಾಮದ ಅರಿವು ಮೂಡಿಸಿದರು ಹಾಗೂ ಪರಿಸರದ ಉಳಿವಿಗಾಗಿ ಮಾನವನ ಕರ್ತ್ಯವವನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಶಾಲೆಯ ಮುಖ್ಯಾದ್ಯಾಪಕರಾದ ಶ್ರೀ.ಎಲ್.ಎಮ್. ಹೆಗಡೆಯವರು ಮಾತನಾಡಿ ನಿರಕ್ಷರಿ ಮಾನವ ಭೂಮಿಯನ್ನು ಉಳಿಸುತ್ತಾ ಬದುಕು ಸಾಗಿಸಿದರೆ ಇಂದಿನ ಸಾಕ್ಷರ ಮಾನವ ಭೂಮಿಯನ್ನು ಅಳಿಸುತ್ತಾ ಬದುಕುತ್ತಿದ್ದಾನೆ. ಮನುಷ್ಯನ ಮನಸಿನಲ್ಲಿ ನಿಸರ್ಗದ ಉಳಿವಿನ ಜಾಗ್ರತೆ ಮೂಡಿಸಿದರೆ ಮಾತ್ರ ಪರಿಸರದ ಉಳಿವು ಸಾಧ್ಯ ಎಂದರು. ಇಕೋ ಕಬ್ಬಿನ ಅಡಿಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ಶ್ರೀಕಾಂತ ಹಿಟ್ನಳ್ಳಿ ಯವರು ಎಲ್ಲರನ್ನು ಸ್ವಾಗತಿಸಿದರು. ಶ್ರೀ ಸುಬ್ರಮಣ್ಯ ಭಟ್ಟ ಅವರು ಪುಷ್ಪ ನೀಡಿ ಗೌರವಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ಮುಕ್ತಾ ನಾಯ್ಕ ಅವರು ಎಲ್ಲರನ್ನು ವಂದಿಸಿದರು. ಶ್ರೀಮತಿ ಸೀಮಾ ಭಟ್ಟರವರು ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲಾ ಸಿಬ್ಬಂದಿಗಳು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version