ಶಿವನ ದರ್ಶನ ಪಡೆದು ಈಜಲು ತೆರಳಿದ ಪ್ರಸಾಸಿಗರ ದಂಡು: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಣೆ ಮಾಡಿದ ಲೈಫ್ ಗಾರ್ಡ್ ಸಿಬ್ಬಂದಿ

ಮುರ್ಡೇಶ್ವರ ಪ್ರವಾಸಕ್ಕೆ ಬಂದ ಮೂವರು ಯುವಕರು ಸಮುದ್ರ ಅಲೆಗೆ ಕೊಚ್ಚಿ ಹೋಗುತ್ತಿದ್ದ ವೇಳೆ ಅಲ್ಲಿನ ಲೈಫ್ ಗಾರ್ಡಗಳು ಬೋಟ್ ಮೂಲಕ ತೆರಳಿ ಮೂವರು ಯುವಕರನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ. ಸಮುದ್ರದಲ್ಲಿ ಕೊಚ್ಚಿಹೋದ ಯುವಕರನ್ನು ಮಾರುತಿ, ಅನಿಲ್ ಕುಮಾರ ಹಾಗೂ ಪುರುಷೋತ್ತಮ ಎಂದು ತಿಳಿದು ಬಂದಿದೆ. ಸದ್ಯ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಹೀಗೆ ಪ್ರವಾಸಕ್ಕೆಂದು ಬಂದ ಶಿವಮೊಗ್ಗ ಕಾಲೇಜಿನ 16 ಯುವಕರ ತಂಡ ಮುರುಡೇಶ್ವರನ ದರ್ಶನ ಪಡೆದು ಮೋಜು ಮಸ್ತಿಗೆ ಸಮುದ್ರಕ್ಕಿಳಿದ್ದಾರೆ. ಈ ವೇಳೆ ಮೂವರು ಯುವಕರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿರುದನ್ನು ಗಮನಿಸಿದ ಸ್ಥಳೀಯ ಲೈಫ್ ಗಾರ್ಡ್ ಗಳು ಬೋಟನಲ್ಲಿ ತೆರಳಿ ಮೂವರು ಯುವಕರನ್ನು ರಕ್ಷಣೆ ಮಾಡಿದ್ದಾರೆ.

ಲೈಪ್ ಗಾರ್ಡಗಳ ಸಮಯ ಪ್ರಜ್ಞೆಯಿಂದ ಮೂವರು ಬದುಕಿದ್ದು ಲೈಪ್ ಗಾರ್ಡ್ಗಳ ಸಾಹಸಕ್ಕೆ ಪ್ರವಾಸಿಗರ ಮೆಚ್ಚುಗೆ ವ್ಯಕ್ತವಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಲೈಫ್ ಗಾರ್ಡ್ ಗಳಾದ ಹನುಮಂತ, ಸಂದೀಪ ಹರಿಕಾಂತ , ಕೇಶವ ಮೊಗೇರ ಹಾಗೂ ಬೀಚ್ ಮೇಲ್ವಿಚಾರಕ ದತ್ತಾತ್ರೇಯ ಶೆಟ್ಟಿ ಉಪಸ್ಥಿತರಿದ್ದರು,.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.