ದರ್ಗಾಕ್ಕೆ ಹಾನಿ ಪ್ರಕರಣ : ಮೂವರನ್ನು ಬಂಧಿಸಿದ ಪೊಲೀಸರು

ಕಾರವಾರ: ಇಲ್ಲಿನ ಕಣಸಗಿರಿ ಬಂದರವಾಡದಲ್ಲಿರುವ ದರ್ಗಾಕ್ಕೆ ಕಿಡಿಗೇಡಿಗಳು ಕೆಲ ದಿನಗಳ ಹಿಂದೆ ಪ್ರವೇಶ ಮಾಡಿ ಧಾರ್ಮಿಕ ಭಾವನೆಗೆ ದಕ್ಕೆಯುಂಟಾಗುವoತೆ ಮಾಡಿದ್ದರು. ಇದೀಗ ಆರೋಪಿಗಳನ್ನು ,ಕೃತ್ಯಕ್ಕೆ ಬಳಸಿದ 2 ಸುತ್ತಿಗೆ, ಒಂದು ಕಾರ್ ಹಾಗೂ ಒಂದು ಮೋಟಾರ ಸೈಕಲ್‌ನ್ನು ವಶಕ್ಕೆ ಪಡೆಯಲಾಗಿದೆ. ಮಹೇಂದ್ರ ಮಂಗೇಶ್ ರಾಣಿ ,ವಿನಾಯಕ್ ಕಾಶಿನಾಥ್ ಸಾವಂತ್ ಹಾಗೂ ಮುರಳಿಧರ್ ದೇವರಾಜ್ ಗೋವೇಕರ್ ಬಂಧಿತ ಆರೋಪಿಗಳು.

ಆರೋಪಿತರು ದರ್ಗಾಕ್ಕೆ ಪ್ರವೇಶಿಸಿ ಹಸಿರು ಬಾವುಟಕ್ಕೆ ಬೆಂಕಿ ಹಚ್ಚಿ ಭಾಗಶಃ ಸುಡುವಂತೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ದರ್ಗಾದ ಗೋಡೆಗಳನ್ನು ಕೆಡವಿ ಹಾಗೂ ಕಬ್ಬಿಣದ ಗ್ರಿಲ್ ಮತ್ತು ಗೇಟನ್ನು ಭಾಗಶಃ ಹಾಳು ಮಾಡಿ ದರ್ಗಾದ ಮಜರ್ ಅನ್ನು ಒಡೆದು ಹಾಕಿ ಅದರ ಮೇಲೆ ಹೊದಿಸಿದ ಹಸಿರು ಗಲೀಪನ್ನು ತೆಗೆದು ಹಾಕಿದ್ದರು. ಈ ಕುರಿತು ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version