ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತೆ: ಗೋಡೆಗೆ ಬಣ್ಣದ ಚಿತ್ತಾರ

ಕುಮಟಾ: ಇಂದು ಶ್ರೀ ಚೌಡೇಶ್ವರಿ ದೇವಸ್ಥಾನ ಕಲ್ಗುಡ್ಡಾ ಸಮಿತಿಯ ವತಿಯಿಂದ 15 ಜನ ಸದಸ್ಯರು ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 2.30 ರ ವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಗಿಯ ಗೋಡೆಯ ಬಣ್ಣಗಳು ಮಾಸಿದ್ದು ಅದನ್ನು ಮನಗಂಡ ಗೋಡೆಗೆ ಬಣ್ಣವನ್ನು ಬಳಿದು ಸುತ್ತಲು ಸ್ವಚ್ಚತೆಯನ್ನು ಮಾಡಲಾಯಿತು.

ಕಲ್ಗುಡ್ಡಾ ಚೌಡೇಶ್ವರಿ ದೇವಾಲಯದ ಎಲ್ಲಾ ಸದಸ್ಯರು ಹಣವನ್ನು ಹೊಂದಿಸಿ ಪೆಂಟ್ ಹಾಗೂ ಇತರೆ ಸಾಮಾಗ್ರಿಗಳನ್ನು ತಂದು ಬಣ್ಣವನ್ನು ಬಳಿದು ಸುಂದರಗೊಳಿಸಿದ್ದಾರೆ, ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಮತ್ತು ಈ ಶಾಲೆಯಲ್ಲಿ ಕಲಿತು ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಹಳೆಯ ವಿಧ್ಯಾರ್ಥಿಗಳು ಶಾಲೆಯ ಅಭಿವೃದ್ಧಿ ಕಡೆಗೆ ಸ್ವಲ್ಪ ಗಮನ ಹರಿಸಬೇಕಾಗಿ ವಿನಂತಿ.

ಈ ಸಂದರ್ಭದಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನ ಕಲ್ಗುಡ್ಡಾ ಸಮಿತಿಯ ಎಲ್ಲಾ ಸದಸ್ಯರು ಹಾಜರಿದ್ದರು

Exit mobile version