ಅಂಕೊಲಾ:ಸುರಕ್ಷಾ ದಂತ ಚಿಕಿತ್ಸಾಲಯದ ಮೂಲಕ ಕಳೆದ 17 ವರ್ಷಗಳಿಂದ ಅಂಕೋಲಾ ತಾಲೂಕಿನಾದ್ಯಂತ ನಗು ಮುಖದ ಸೇವೆಗೆ ಹೆಸರಾ ಗಿರುವ ಡಾ.ಕೃಷ್ಣ ಪ್ರಭು ಮತ್ತು ಡಾ.ಶಿಲ್ಪಾ ಪ್ರಭು ದಂಪತಿಗಳು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಲೇಸರ್ ಥೆರಪಿ ಕೇಂದ್ರವನ್ನು ಭಾನುವಾರ ಆರಂಭಿಸಿದ್ದಾರೆ.
ಅಂಕೋಲಾ ತಾಲೂಕಿನ ಹೆಸರಾಂತ ಸುರಕ್ಷಾ ದಂತ ಚಿಕಿತ್ಸಾಲಯದ ನೂತನ ಶಾಖೆಯು ಬಸ್ ನಿಲ್ದಾಣ ಹತ್ತಿರದ ಪುರಸಭೆ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಶುಭಾರಂಭಗೊಂಡಿದ್ದು, ಡೆಂಟಲ್ ಸ್ಪೆಷಾಲಿಟಿಸ್ ಮತ್ತು ಲೇಸರ್ ನೋವು ನಿವಾರಣಾ ಕೇಂದ್ರ ಎಂಬ ಹೆಸರಿನೊಂದಿಗೆ ಸುತ್ತಮುತ್ತಲ ಜನತೆಯ ಸೇವೆಗೆ ತೆರೆದುಕೊಂಡಿದೆ. ಡಾ. ಕೃಷ್ಣ ಪ್ರಭು ಅವರ ತಾಯಿ ಗೀತಾ ಗಣಪತಿ ಶಾನಭಾಗ ರಿಬ್ಬನ್ ಕತ್ತರಿಸಿ ಚಿಕಿತ್ಸಾ ಲಯ ಉದ್ಘಾಟಿಸಿದರು.
ತನ್ನ ತಾಯಿಯವರ ಆಶೀರ್ವಾದಿಂದ ಜನರ ಅನುಕೂಲತೆಗಾಗಿ ಜಿಲ್ಲೆಯಲ್ಲಿಯೇ ಮೊದಲ ಬಾರಿ ಲೇಸರ್ ಥೆರಪಿ ಆರಂಭಿಸಿದ್ದು, ಹಲವು ರಿಯಾಯಿತಿ ನೀಡಲಿದ್ದೇವೆ , ಲೇಸರ್ ಚಿಕಿತ್ಸೆಯ ಜೊತೆ ಸುರಕ್ಷಾ ಹೆಲ್ತ್ ಕಾರ್ಡ್ ನ ಪ್ರಯೋಜನ ಪಡೆದುಕೊಳ್ಳುವಂತೆ ಜನತೆಯಲ್ಲಿ ವಿನಂತಿ.
ಡಾ. ಕೃಷ್ಣ ಪ್ರಭು ಮಾತನಾಡಿ, ಚಿಕಿತ್ಸಾಲಯದ ಮುಖ್ಯಸ್ಥ
ಅಂಕೋಲಾ ತಾಲೂಕಿನ ಹಿರಿಯ ವರ್ತಕರಾದ ಪುಂಡ್ಲಿಕ ಪ್ರಭು ಅವರು ಸುರಕ್ಷಾ ಹೆಲ್ತ್ ಕಾರ್ಡ್ ಬಿಡುಗ ಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಭಾಸ್ಕರ ಕೇ.ನಾರ್ವೇಕರ್, ರಾಜೇಂದ್ರ ಶೆಟ್ಟಿ, ಸಂಜಯ ಲೋಕಪಾಲ್, ಸುನೀಲ್ ಪ್ರಭು, ಪ್ರವೀಣಚಂದ್ರ ಹೆಗಡೆ, ದರ್ಶನ ಪೈ, ಸುನೀಲ್ ಅಂಕೋಲೆಕರ್ ಮತಿತ್ತರರು ಉಪಸ್ಥಿತರಿದ್ದು, ಡಾ.ಕೃಷ್ಣ ಪ್ರಭು ದಂಪತಿಗಳ ಸೇವೆಯನ್ನು ಶ್ಲಾಘಿಸಿದರು. ಪತ್ನಿ ಶಿಲ್ಪಾ ಪ್ರಭು, ಮಗಳು ಆರುಷಿ ಪ್ರಭು ಮತ್ತು ಕುಟುಂಬದವರು ಅತಿಥಿಗಣ್ಯರನ್ನು ಸ್ವಾಗತಿಸಿ, ಸತ್ಕಾರ ನೀಡಿದರು.
ಈ ಶಾಖೆಯಲ್ಲಿ ಲೇಸರ್ ಆಧಾರಿತ ಸಿಂಗಲ್ ವಿಜಿಟ್ ರೂಟ್‌ಕೆನಲ್ ಚಿಕಿತ್ಸೆ, ಲೇಸರ್ ಆಧಾರಿತ ನೋವು ರಹಿತ ವಸಡಿನ ಚಿಕಿತ್ಸೆ, ಡಿಜಿಟಲ್ ಎಕ್ಸರೇ ಸೌಲಭ್ಯ, ಬಾಯಿ ಹುಣ್ಣು, ಬಾಯಿ ದುವರ್ಸಾನೆ ನಿವಾರಣೆ ಚಿಕಿತ್ಸೆ ಮುಂತಾದ ಸೇವೆಗಳ ಜೊತೆ ಕೊಲ್ಡ್ ಲೇಸರ್ ಥೆರಪಿ ಮೂಲಕ ಮಂಡಿನೋವು, ಸೋಂಟ ನೋವು, ಬೆನ್ನುನೋವುಗಳಿಗೆ ಸಂಬಂಧಿಸದ ಚಿಕಿತ್ಸೆಯು ಲಭ್ಯವಾಗಲಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
[sliders_pack id=”1487″]