ಅಕ್ರಮ ಗೋವಾ ಮದ್ಯ ಸಾಗಾಟ :ಜಂಟಿ ಕಾರ್ಯಾಚರಣೆ : ಪ್ರತ್ಯೇಕ ಪ್ರಕರಣ ದಾಖಲು | ಎರಡು ದ್ವಿಚಕ್ರ ವಾಹನ ಸಮೇತ ಆರೋಪಿಗಳು ವಶಕ್ಕೆ

ಅಂಕೋಲಾ: ಎರಡು ದ್ವಿಚಕ್ರ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ವಶಪಡಿಸಿಕೊಂಡ ಅಂಕೋಲಾ ಅಬಕಾರಿ ಇಲಾಖೆ ಸಿಬ್ಬಂದಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ರಾ.ಹೆ 66 ರ ಹಾರವಾಡ ರೈಲ್ವೆ ಸೇತುವೆ ಹತ್ತಿರ ನಡೆದಿದೆ.

ಕಾರವಾರ ತಾರಿವಾಡಾ ನಿವಾಸಿ ಪ್ರವೀಣ ರಾಜನ್ ನಾಯರ್ ಮತ್ತು ವಿವೇಕಾನಂದ ನಗರ ನಿವಾಸಿ ಮುಶ್ತಾಕ್ ಹುಸೇನ್ ಬೇಗ್ ಬಂಧಿತ ಆರೋಪಿಗಳಾಗಿದ್ದಾರೆ.

ಗೋವಾ ನೋಂದಣಿ ಸಂಖ್ಯೆ ಹೊಂದಿರುವ ಹೊಂಡಾ ಆಕ್ಟಿವಾ ಮತ್ತು ಹೊಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ 23000 ಲೀಟರ್ ಗೋವಾ ಮದ್ಯ ಮತ್ತು 32500 ಲೀಟರ್ ಬಿಯರ್ ಸಾಗಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಲಾಗಿದ್ದು,ಎರಡು ದ್ವಿಚಕ್ರ ವಾಹನ ಸೇರಿ ಸುಮಾರು 1 ಲಕ್ಷ 10830 ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ನೀರೀಕ್ಷಕರಾದ ಬಸವರಾಜ ಕರವಿನಕೊಪ್ಪ ಕಾರವಾರ, ಹಾಗೂ ಅಬಕಾರಿ ನಿರೀಕ್ಷಕ ರಾಹುಲ್ ಎಸ್ ನಾಯಕ ಅಂಕೋಲಾ ರವರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂಕೋಲಾ ಕಚೇರಿ ಸಿಬ್ಬಂದಿ ಸುರೇಶ ಹಾರೆಗೊಪ್ಪ, ಶ್ರೀಶೈಲ ಹಡಪದ, ಗಿರೀಶ್ ಅರವಾಳೆ,ಬಸಪ್ಪ ಅಂಗಡಿ, ಈರಣ್ಣ ಕುರುಬೇಟ, ರವಿ ಸಂಕಣ್ಣನವರ್,ವಾಹನ ಚಾಲಕ ವಿನಾಯಕ ನಾಯ್ಕ, ಚಂದ್ರಶೇಖರ ಪಾಟೀಲ, ರವಿಚಂದ್ರ ನಾಯಕ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version