ಯಲ್ಲಾಪುರ: ಅಡಿಕೆಗೆ ರೇಟ್ ಬಂದಿದ್ದೆ ತಡ, ಇತ್ತಿಚೆಗೆ ಎಲ್ಲೆಡೆ ಕಳ್ಳತನ ಪ್ರಕರಣ ಹೆಚ್ಚುತ್ತಿದೆ. ಯಲ್ಲಾಪುರ ತಾಲೂಕಿನಲ್ಲೂ ಕಳೆದ 2 ತಿಂಗಳಿAದ ಅಡಿಕೆ ಮತ್ತು ಕಾಳು ಮೆಣಸು ಕಳ್ಳತನ ಪ್ರಕರಣಗಳು ದಾಖಲಾಗುತ್ತಿದೆ. ಇದೀಗ ಈ ಕಳ್ಳತನಕ್ಕೆ ಸಂಬAಧಿಸಿದAತೆ ಯಲ್ಲಾಪುರ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
ತಾಲೂಕಿನ ಬಿಳ್ಕಿ ಗ್ರಾಮದ ಜಡಗಿನಕೊಪ್ಪದ ಪಿಲೀಪ್ ಕೃಷ್ಣ ಸಿದ್ಧಿ ಹಾಗೂ ಆನಂದ ಸೋಮಾ ಸಿದ್ಧಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿತರು ಸವಣಗೇರಿ, ಹೊನ್ನಳ್ಳಿ, ಹೊಸ್ಮನೆ, ಕಲ್ಲಾರಜಡ್ಡಿಯಲ್ಲಿ ಅಡಿಕೆ, ಕಾಳುಮೆಣಸು ಕಳ್ಳತನ ಮಾಡಿರುವ ಬಗ್ಗೆ ತಿಳಿಸಿದ್ದಾರೆ. ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಬೈಟ್.,. ಕಳ್ಳತನವಾದ 2 ಕ್ವಿಂಟಲ್ ಕೆಂಪು ಅಡಿಕೆ, ಹಾಗೂ ಸುಮಾರು 22 ಕೆ.ಜಿ ಕಾಳುಮೆಣಸನ್ನು ವಶಪಡಿಸಿಕೊಳ್ಳಲಾಗಿದೆ.
ವಿಸ್ಮಯ ನ್ಯೂಸ್, ಯಲ್ಲಾಪುರ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.