ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಧಾರೇಶ್ವರದಲ್ಲಿ ಜ್ಞಾನ-ವಿಜ್ಞಾನ ಶಿಬಿರ

ಕೆನರಾ ವೆಲ್ ಫೇರ್ ಟ್ರಸ್ಟಿನ ಸಂಸ್ಥಾಪಕರಾದ ಡಾll ದಿನಕರ ದೇಸಾಯಿಯವರ ಅಭಿಲಾಷೆಯಂತೆ ಹಳ್ಳಿ-ಹಳ್ಳಿಗಳಲ್ಲೂ ಶಿಕ್ಷಣದ ಕ್ರಾಂತಿಯಾಗಬೇಕು, ಬಡವ-ಬಲ್ಲಿದ ಎಂಬ ಭೇದಭಾವವಿಲ್ಲದೆ ಎಲ್ಲರೂ ಶಿಕ್ಷಣ ಪಡೆಯಬೇಕೆಂಬ ಧ್ಯೇಯೋದ್ದೇಶ ವನ್ನು ಇಟ್ಟುಕೊಂಡು ಹುಟ್ಟುಹಾಕಿದ ಸಂಸ್ಥೆಯ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಯಲ್ಲಿ ಜೀವನದ ಪ್ರತಿಯೊಂದು ಕಲೆಯನ್ನು ಕಲಿಯಬೇಕು ಎಂಬುದು ಅವರ ಉದ್ದೇಶವಾಗಿತ್ತು. ಅವರ ಆಶಯದಂತೆ ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಧಾರೇಶ್ವರದಲ್ಲಿ *”ಜ್ಞಾನ-ವಿಜ್ಞಾನ”* ಶಿಬಿರವನ್ನು 18-02-2022 ರಿಂದ 24 -02-2022 ರ ವರೆಗೆ ಬೆಳ್ತಂಗಡಿಯ ನಿವೃತ್ತ ಉಪನ್ಯಾಸಕರಾದ ಶ್ರೀ ವಿಶ್ವೇಶ್ವರ ಭಟ್ ರವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ 7 ದಿನದ ಶಿಬಿರವನ್ನು ಡಾll ಎ. ವಿ. ಬಾಳಿಗಾ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಶ್ರೀಯುತ ಶಂಕರ್ ಭಟ್ ರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಆನಂದು ಶಾನಭಾಗ್ ರವರು ವಹಿಸಿದ್ದರು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಶ್ರೀ ನಾಗರಾಜ ಶೇಟ್ , ಶ್ರೀ ಏಮ್.ಜಿ. ಭಟ್, ಶ್ರೀ ಮಹೇಶ್ ನಾಯ್ಕ ರವರು ಉಪಸ್ಥಿತರಿದ್ದರು. ಶಿಬಿರದಲ್ಲಿ ವಿಜ್ಞಾನ ತರಗತಿಯ ಜೊತೆ ಜೊತೆಯಲ್ಲಿ ಏಳು ದಿನಗಳ ಕಾಲ ಗೀತರಾಮಾಯಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಖ್ಯಾತ ಗೀತರಾಮಾಯಣ ಗಾಯಕರಾದ ಶ್ರೀ ಶ್ರೀಪಾದ್ ಭಟ್ಟ ಕಡತೋಕ, ಇನ್ನೋರ್ವ ಗಾಯಕಿ ನಮ್ಮ ಶಾಲೆಯ ಹಳೆ ವಿದ್ಯಾರ್ಥಿನಿ ಕುಮಾರಿ ನೇಹಾ ಭಟ್, ಅರ್ಥದಾರಿಗಳಾಗಿ ಪ್ರೊ ಶಂಕರ್ ಭಟ್, ಚಿತ್ರಕಾರರಾಗಿ ಶ್ರೀ ನೀರ್ನಳ್ಳಿ ಗಣಪತಿ ಭಟ್, ಹಾರ್ಮೋನಿಯಂ ವಿಜಯಕುಮಾರ್ ಮಹಾಲೆ, ತಬಲಾ ಹರೀಶ್ ರಾಯ್ಕರ್ ರವರ ಉಪಸ್ಥಿತಿಯಲ್ಲಿ ನಡೆಯಿತು. ಪ್ರತಿದಿನ ಸಾಹಿತಿಗಳು ,ವಿಜ್ಞಾನಿಗಳು, ಇಂಜಿನಿಯರ್ ,ಕೃಷಿ ತಜ್ಞರು, ಶಿಕ್ಷಕರು ಹಾಗೂ ಸಾಧಕರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಪನ್ಯಾಸ ನೀಡಿದರು.

ಖ್ಯಾತ  ಕಲಾವಿದರಾದ, ಶ್ರೀ ಮಹೇಶ್ ಗುನಗಾರವರು ಏಳು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಕ್ಲೇ ಮಾಡಲಿಂಗ್ ಬಗ್ಗೆ ಹೇಳಿಕೊಟ್ಟರು. ಶಿಬಿರದಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ, ಜ್ಯೋತಿರ್ದ್ಯಾನ, ಕುಣಿತ ಭಜನೆ, ನಕ್ಷತ್ರ ವೀಕ್ಷಣೆ, ಲ್ಯಾಂಗ್ವೇಜ್ ಗೇಮ್ಸ್, ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆದವು. ದಿನಾಂಕ 24-02-2022 ರಂದು ಸಮಾರೋಪ ಸಮಾರಂಭ ನಡೆಯಿತು ಅಧ್ಯಕ್ಷತೆಯನ್ನು ಕೆನರಾ ವೆಲ್ ಫೇರ್ ಟ್ರಸ್ಟಿನ ಟ್ರಸ್ಟಿಗಳು ಆದ ಶ್ರೀಯುತ ಕೆ. ವಿ. ಶೆಟ್ಟಿ ಯವರು ವಹಿಸಿದ್ದರು.

ವೇದಿಕೆಯಲ್ಲಿ ಪ್ರೊ ಶಂಕರ್ ಭಟ್,ಬೆಳ್ತಂಗಡಿಯ ನಿವೃತ್ತ ಉಪನ್ಯಾಸಕರಾದ ಶ್ರೀ ವಿಶ್ವೇಶ್ವರ ಭಟ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಆನಂದು ಶಾನಭಾಗ್,   ಸಮಿತಿಯ ಶ್ರೀ ನಾಗರಾಜ ಶೇಟ್ , ಶ್ರೀ ಏಮ್.ಜಿ. ಭಟ್, ಶ್ರೀ ಸಚಿನ್ ನಾಯ್ಕ, ಶ್ರೀ ಮಹೇಶ್ ನಾಯ್ಕ, ಶ್ರೀ ಮೋಹನದಾಸ್ ಶಾನಭಾಗ್ , ಜನತಾ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ ಶ್ರೀ ಗೋಪಿ ಭಜಂತ್ರಿ, ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಜಗದೀಶ್ ಗುನಗಾ ಹಾಗೂ ದಿನಕರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ವೆಂಕಟೇಶ್ ಶೇಟ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಾಕ್ಷಿಯಾದರು. ಎಂಟನೇ ತರಗತಿಯ ವಿದ್ಯಾರ್ಥಿಗಳು ಸಂಪೂರ್ಣ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version