ಉಕ್ರೇನ್ ನಲ್ಲಿ ಸಿಲುಕಿರುವ ಉತ್ತರಕನ್ನಡದ ವಿದ್ಯಾರ್ಥಿಗಳ ಜೊತೆ ಮಾತನಾಡಿದ್ದೇನೆ: ಸಂಪರ್ಕದಲ್ಲಿದ್ದೇವೆ: ಜಿಲ್ಲಾಧಿಕಾರಿಗಳು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಒಬ್ಬರುಬನವಾಸಿಯಿಂದ, ಮತ್ತಿಬ್ಬರು ಮುಂಡಗೋಡಿನವರು’ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮಾಹಿತಿ ಹಂಚಿಕೊಂಡಿದ್ದಾರೆ. ಬನವಾಸಿ ವಿದ್ಯಾರ್ಥಿಯೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

ಆತ ವಿನಿಟ್ಟಿಯಾದಿಂದ ಬಸ್ ಮೂಲಕ ರೊಮೇನಿಯಾಗಡಿಯನ್ನು ತಲುಪಿದ್ದಾನೆ. ರಾತ್ರಿ 9ರ ಹೊತ್ತಿಗೆ ಮುಂಡಗೋಡದ ಇಬ್ಬರೊಂದಿಗೆ ಮಾತನಾಡಿದ್ದು ,ಓರ್ವರು ಖಾರ್ಕಿವ್ ಭೂಗತ ಮೆಟ್ರೋ ನಿಲ್ದಾಣದಲ್ಲಿ, ಮತ್ತೋರ್ವ ಕಾಲೇಜು ಹಾಸ್ಟೆಲ್ ಬಂಕರ್‌ಗಳಲ್ಲಿದ್ದಾರೆ. ನಾವು ಅವರ ಸುರಕ್ಷತೆಯ ಬಗ್ಗೆ ವಿದೇಶಾಂಗವ್ಯವಹಾರಗಳ ಸಚಿವಾಲಯದಿಂದ ನಿರಂತರ ಮಾಹಿತಿಪಡೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version