ಉಕ್ರೇನ್ ನಲ್ಲಿ ಸಿಲುಕಿರುವ ಪಾಲಕರ ಮನೆಗೆ ಸಚಿವ ಹೆಬ್ಬಾರ್ ಭೇಟಿ: ಪೋಷಕರಿಗೆ ದೈರ್ಯ ತುಂಬಿದ ಸಚಿವರು

ಮುಂಡಗೋಡ: ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಮುಂಡಗೋಡ ಮೂಲದ ಸ್ನೇಹಾ ಮತ್ತು ನಾಜಿಯಾ ಅವರ ಮನೆಗಳಿಗೆ ಕಾರ್ಮಿಕ ಸಚಿವ ಹಾಗೂ ಈ ಕ್ಷೇತ್ರದ ಶಾಸಕರೂ ಆಗಿರುವ ಶಿವರಾಮ ಹೆಬ್ಬಾರ್ ಇಂದು ಭೇಟಿ ನೀಡಿ, ಪಾಲಕರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.

ಇಬ್ಬರೂ ವಿದ್ಯಾರ್ಥಿನಿಯರ ಪಾಲಕರಿಂದ ಮಾಹಿತಿ ಪಡೆದ ಶಿವರಾಮ ಹೆಬ್ಬಾರ್, ತಮಗೂ ಬಂದಿರುವ ಮಾಹಿತಿಗಳನ್ನು ಅವರೊಂದಿಗೆ ಹಂಚಿಕೊಂಡರು. ಎಲ್ಲರೂ ಸುರಕ್ಷಿತವಾಗಿ ಬರಲಿದ್ದಾರೆ, ಧೈರ್ಯದಿಂದಿರಿ. ಸರ್ಕಾರ ಎಲ್ಲರನ್ನೂ ಕರೆತರಲು ವ್ಯವಸ್ಥೆ ಮಾಡಿದೆ ಎಂದು ಪಾಲಕರಿಗೆ ಅಭಯ ನೀಡಿದರು.

Exit mobile version