ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಹೊಡೆದ ಸೈಕಲ್ : ವೈದ್ಯಕೀಯ ವಿದ್ಯಾರ್ಥಿನಿ ಸಾವು

ಜೋಯ್ಡಾ: ಸೈಕ್ಲಿಂಗ್‌ಗೆ ತೆರಳಿದ್ದ ವೇಳೆ ಯುವತಿಯೊಬ್ಬಳು ಅತಿವೇಗದ ಚಾಲನೆಯಿಂದಾಗಿ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಜೊಯಿಡಾ ತಾಲೂಕಿನ ಅಕೋರ್ಡಾ ಎಂಬಲ್ಲಿ ನಡೆದಿದೆ. ಛತ್ತಿಸಘಡ ರಾಜ್ಯದ ತ್ರಿಮೂರ್ತಿ ಕಾಲೋನಿಯ ನಿವಾಸಿ, 25 ವರ್ಷ ವಯಸ್ಸಿನ ಮೆಡಿಕ್ ವಿದ್ಯಾರ್ಥಿನಿ ದೇವಿಕಾ ವಾಸವಾಣಿ ಮೃತಪಟ್ಟ ಯುವತಿ.

ಈಕೆ ಸ್ನೇಹಿತರ ಜೊತೆಗೆ ಜೊಯಿಡಾ ತಾಲ್ಲೂಕಿಗೆ ಪ್ರವಾಸಕ್ಕೆಂದು ಬಂದಿದ್ದಳು. ಈ ವೇಳೆ ತಾಲೂಕಿನ ಬಿರಂಪಾಲಿ ಗ್ರಾಮದ ಹಿಡನ್‌ವ್ಯಾಲಿ ಹೋಂ ಸ್ಟೇಯ ಸೈಕಲನ್ನು ತೆಗೆದುಕೊಂಡು ಸೈಕ್ಲಿಂಗ್ ಮಾಡುತ್ತಾ ಅಕೋರ್ಡಾ ಗ್ರಾಮದ ಕಡೆಗೆ ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ಸೈಕಲ್ ಸ್ಕಿಡ್ ಆಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿದ ಎನ್ನಲಾಗಿದೆ.

ಪರಿಣಾಮ ತಲೆಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ದೇವಿಕಾ ವಾಸವಾಣಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ, ಶವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version