ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಅಭಿಯೋಜನ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಪಟ್ಟಣದ ಸಿ ಡಿ ಪಿ ಓ ಕಛೇರಿ ಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸ್ಥಳೀಯ ನ್ಯಾಯಧೀಶರಾದ ಸಿದ್ದರಾಮ ಎಸ್  ಮಾತನಾಡಿ ಹೆಣ್ಣುಮಕ್ಕಳು ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಮಹಿಳೆಯರಿಗೆ ಉದ್ಯೋಗ, ಅವಕಾಶ ಎಲ್ಲವನ್ನು ಕಾನೂನಿನಲ್ಲಿ  ನೀಡಲಾಗಿದೆ  . ಸಂವಿಧಾನ ಬಂದ ಮೇಲೆ ಸಾಮಾನ್ಯ ನು ಕೂಡ ರಾಜಾನಗುವ ಅವಕಾಶ  ನೀಡಿದೆ .ಇದು ಭಾರತ ಸಂವಿಧಾನ ದ ಮಹತ್ವ ವಾಗಿದೆ ಇವತ್ತು ಮಹಿಳೆ ಯರು ಜನಪ್ರತಿನಿದಿನಗಳಾಗಿ ಸೇವೆ ಸಲ್ಲಿಸುತ್ತಿರುವುದು ಖುಷಿ ನೀಡುತ್ತದೆ  ಭಾರತದ ಸಂವಿಧಾನ ದಲ್ಲಿ ಮಹಿಳೆಯರಿಗೆ  ಹೆಚ್ಚಿನ ಅವಕಾಶ ನೀಡಲಾಗಿದೆ ಎಂದರು .

ದೇಶಕ್ಕಾಗಿ ಸೇವೆ ಸಲ್ಲಿಸಿ ಉತ್ತಮ ಸಂದೇಶ ನೀಡಿದ ಸಾಧಕ ಮಹಿಳೆಯರನ್ನು ಸ್ಮರಿಸಿದರುಮುಖ್ಯ ಅತಿಥಿ ಗಳಾಗಿ ವಕೀಲರ ಸಂಘದ ಅಧ್ಯಕ್ಷ ದಿನೇಶ್ ನಾಯ್ಕ್ ಮಾತನಾಡಿ ಮಹಿಳೆಯರ ಕಾನೂನಿನ ಬಗೆ ತಿಳಿಸಿದರು , ಹಿರಿಯ ವಕೀಲರಾದ ಏನ್ ಡಿ ನಾಯ್ಕ್ ಹಾಗೂ ಶ್ರೀಮತಿ ರೇಖಾ ಹರವಿ ಉಪನ್ಯಾಸ ನೀಡಿದರು ಕಾರ್ಯಕ್ರಮ ದಲ್ಲಿ ಜನ್ಮ ದಾಖಲೆ, ವಿವಾಹ ನೋಂದಣಿ, ಮರಣ ದಾಖಲೆ ಬಗ್ಗೆ ಮಾಹಿತಿ ನೀಡಲಾಯಿತು. ಮಾರ್ಚ್ 12 ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳುವಂತೆ ನ್ಯಾಯಧೀಶರು ತಿಳಿಸಿದರು ಸಿ ಡಿ ಪಿ ಓ ಸುಶೀಲ ಮೊಗೇರ್ ಕಾರ್ಯಕ್ರಮ ದ  ಅಧ್ಯಕ್ಷತೆ ವಹಿಸಿದ್ದರು   ಶ್ರೀಮತಿ ಸಾವಿತ್ರಿ ಪ್ರಾರ್ಥನೆ, ಶ್ರೀಮತಿ  ಸುಜಾತಾ ಸ್ವಾಗತ, ಕಮಲಾಕ್ಷಿ  ನಿರೂಪಿಸಿದರು ಆಯೇಷಾ ವಂದಿಸಿದರು.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version