Follow Us On

WhatsApp Group
Big News
Trending

ಕಟ್ಟಡದ ಕೆಳಗಭಾಗ ಕುಸಿತ: ಶಾಲಾ ವಿದ್ಯಾರ್ಥಿಗಳ ತಲೆ ಮೈಮೇಲೆ ಬಿದ್ದು ಗಾಯ: ಊಟದ ಸಮಯವಾಗಿದ್ದರಿಂದ ತಪ್ಪಿತು ಭಾರೀ ಅನಾಹುತ

ಪಾಠ ಕೇಳುವಾಗಲೇ ಕುಸಿದ ಶಾಲಾ ಛಾವಣಿ

ಅಂಕೋಲಾ: ಪಟ್ಟಣದ ಹೃದಯ ಭಾಗದಲ್ಲಿರುವ ನಿರ್ಮಲ ಹೃದಯ ಕಾನ್ಸೆಂಟ್ ಶಾಲೆಯ, 4ನೇ ತರಗತಿ ನಡೆಸುತ್ತಿದ್ದ ಕಟ್ಟಡದ ಸ್ಲಾಬ್ ನ ಕೆಳಪದರ ಭಾಗಶಃ  ಹಠಾತ್ ಕುಸಿದು 4-5 ವಿದ್ಯಾರ್ಥಿಗಳು ಗಾಯಗೊಂಡ, ಘಟನೆ ಬುಧವಾರ ಮದ್ಯಾಹ್ನ ನಡೆದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ನಿರ್ಮಲ ಕಾನ್ವೆಂಟ್ ಸ್ಕೂಲಿನ ಮೇಲ್ಮಹಡಿಯ ಕೋಣೆಯೊಂದರಲ್ಲಿ  ನಡೆಸಲಾಗುತ್ತಿದ್ದ 4 ನೇ ತರಗತಿಯ ಕ್ಲಾಸ್ನಲ್ಲಿ ಮಧ್ಯಾಹ್ನದ ಊಟದ ಸಮಯದಲ್ಲಿ  ಈ ಅವಘಡ ಈ ವೇಳೆ  ಕೊಠಡಿಯ ಒಳಗಡೆ ಕೆಲವೇ ಕೆಲವು ವಿದ್ಯಾರ್ಥಿಗಳಿದ್ದು, ಊಟದ ಸಮಯವಾದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ಕ್ಲಾಸ್ ರೂಂ ನಿಂದ ಹೊರಗಿದ್ದರು ಎನ್ನಲಾಗಿದೆ. ಒಂದೊಮ್ಮೆ ಕ್ಲಾಸ್ ನಡೆಸುತ್ತಿರುವ ವೇಳೆಯೇ ಸ್ಲ್ಯಾಬ್ ನ ಕೆಳ ಪದರ ಕುಸಿದಿದ್ದರೆ ಹೆಚ್ಚಿನ ಅನಾಹುತ ಆಗುತ್ತಿತ್ತು ಎನ್ನಲಾಗಿದೆ.               

ಮಧ್ಯಾಹ್ನ 12.35 ರ ನಂತರ ಈ ಅವಘಡ ನಡೆದಿದೆ ಎನ್ನಲಾಗಿದ್ದು , ಈ ವೇಳೆ ಕೆಲ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದರೆ, ಇನ್ನು ಕೆಲವರು ಸಹಪಾಠಿಗಳೊಂದಿಗೆ ಆಟ-ಪಾಠಗಳಲ್ಲಿ ತೊಡಗಿದ್ದರು ಎನ್ನಲಾಗಿದ್ದು  ಈ ವೇಳೆ ಸ್ಲಾಬಿನ ಭಾಗಶಃ  ಕೆಳಪದರ ಧುತ್ತನೆ ಕುಸಿದು ಬಿದ್ದಿದೆ. ಕೆಲ ಮಕ್ಕಳು ಇದರಿಂದ ಕಂಗಾಲಾಗಿ ಓಮ್ಮೇಲೆ  ಓಡಿ ಹೋಗುವ ಪ್ರಯತ್ನ ಮಾಡಿದರೆ, ತಮ್ಮ ತಲೆ – ಮೈ ಮೇಲೆ ಬಿದ್ದ ಕಾಂಕ್ರೀಟ್ ತುಂಡುಗಳಿಂದ ಆದ ಗಾಯಗಳನ್ನು ಲೆಕ್ಕಿಸದೇ , ಓಡಿ ಬಂದರು.

ಈ ಘಟನೆ  ಕ್ಲಾಸರೂಂನ ಹಿಂಬಂದಿ ಭಾಗದಲ್ಲಿಯೇ ಆಗಿದ್ದು, ಮುಂಬದಿ ಆಗಿದ್ದರೂ ಇನ್ನಷ್ಟು  ತೊಡಕಾಗುತ್ತಿತ್ತು ಎನ್ನಲಾಗಿದೆ. ಸ್ಟ್ಯಾಬನ ಭಾರವಾದ ಕಾಂಕ್ರೀಟ್ ಪದರ ಕುಸಿದು ಬಿದ್ದ ಪರಿಣಾಮ ಕೆಲ ವಿದ್ಯಾರ್ಥಿಗಳಿಗೆ ತಲೆ, ಮೈ  ಕೈ ಗಳಿಗೆ ಪೆಟ್ಟಾಗಿದೆ. ಕ್ಲಾಸ್ ರೂಂ ನ ಡೆಸ್ಕ್ ಸಹ ಮುರಿದು ಇಲ್ಲಿಯ ಪರಿಸ್ಥಿತಿ ಸಾರಿ ಹೇಳುವಂತಿದೆ. ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ ಉದಯ ಕುಂಬಾರ, ಪಿಎಸೈ ಪ್ರವೀಣ ಕುಮಾರ, ತಾಲೂಕಾ ಪಂಚಾಯತ ಇ ಓ ಪಿವೈ ಸಾವಂತ ಮತ್ತಿತರ ಅಧಿಕಾರಿಗಳು ಶಾಲೆಗೆ ಬಂದು ಸ್ಥಳ ಪರಿಶೀಲಿಸಿದರು ಮತ್ತು ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿಗಳ ಆರೋಗ್ಯ ಮಾಹಿತಿ ಪಡೆದು, ಮಕ್ಕಳನ್ನು ಸಂತೈಸಿ , ವಿದ್ಯಾರ್ಥಿ ಪಾಲಕರಿಗೂ ಧೈರ್ಯ ತುಂಬಿದರು.

ಬಿಇಓ ಮಂಗಳ ಲಕ್ಷ್ಮಿ ಪಾಟೀಲ್ ತಾಲೂಕಿನ ಡೊಂಗ್ರಿ,ಹೆಗ್ಗಾರ, ಕೈಗಡಿ ಮತ್ತಿತರ ಭಾಗಗಳ  ಶಾಲಾ ಪರಿಶೀಲನೆಗೆ ತೆರಳಿದ್ದರಿಂದ ಮೊಬೈಲ್ ನೆಟ್ವರ್ಕ್  ಸಮಸ್ಯೆಯಿಂದ ಸಂಪರ್ಕಕ್ಕೆ ಸಿಗದೇ,ತಕ್ಷಣಕ್ಕೆ ಘಟನಾ ಸ್ಥಳಕ್ಕೆ ಬರಲು ಸಾಧ್ಯವಾಗಲಿಲ್ಲ ಎನ್ನಲಾಗಿದ್ದು,ಸಮನ್ವಯಾಧಿಕಾರಿ  ಹರ್ಷಿತಾ ಗಾಂವಕರ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಾಲೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದರು. ಕಾನ್ವೆಂಟನ ಮುಖ್ಯಾ ಧ್ಯಾಪಕರು, ಸಹ ಶಿಕ್ಷಕರು ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿಗಳ ಆರೋಗ್ಯ ಕಾಳಜಿಗೆ ಮುಂದಾದರು.

ನಂತರ ಬಿ ಇ ಓ ಅವರು ಆಗಮಿಸಿ ಸ್ಥಳ ಪರಿಶೀಲಿಸಿ ಮಾಹಿತಿ ಪಡೆದುಕೊಂಡು ,ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಾಳೆಯಿಂದ ಕ್ಲಾಸ್ ನಡೆಸಬಹುದೇ ಎಂಬಿತ್ಯಾದಿ ವಿಷಯಗಳನ್ನು ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ  ತಿಳಿಸಿದರು.   ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಸಫಲ್ ಡಿ ಚಿಂಚರಕರ ಈತನ ತಲೆಗೆ ಪೆಟ್ಟು ಬಿದ್ದು ಸ್ವಿಚ್ ಅಳವಡಿಸಲಾಗಿದೆ. ಮೈ ಕೈಗಳಿಗೆ ತರಚಿದ ರೀತಿಯ ಗಾಯಗಳಾಗಿವೆ. ಅಮೋಘ ನಾಯ್ಕ ಎನ್ನುವವನಿಗೂ  ಗಾಯಗಳಾಗಿದೆ ಎನ್ನಲಾಗಿದ್ದರೂ ತಾಲೂಕ ಆಸ್ಪತ್ರೆಗೆ ಕರೆತಂದತಿಲ್ಲ.

ಸುಹಾನಿ ದೀಪಕ ಶೇಡಗೇರಿ, ಸೃಷ್ಟಿ ಎಸ್ ನಾಯ್ಕ ಇವರಿಗೂ ಆಸ್ಪತ್ರೆಗೆ ದಾಖಲಿಸಲಾಗಿದೆ.. ಒಂದನೇ ತರಗತಿಯ ವಿದ್ಯಾರ್ಥಿ ಸದ್ವಿನ್ ಚಿಂಚರಕರ ತನ್ನ ಸಹೋದರನ ಕೋಣೆಗೆ ಊಟ ಮಾಡಲು ಬಂದು ಆತನೂ ಗಾಯಗೊಳ್ಳುವಂತಾಗಿದೆ.ಇಬ್ಬರು ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರಕ್ಕೆ ಕರೆದೊಯ್ಯಲಾಗಿದೆ. ಮಕ್ಕಳ ಊಟದ ತಟ್ಟೆಗಳಲ್ಲಿ ಕಾಂಕ್ರೀಟ್ ತುಂಡಿನ ಪುಡಿ ಬಿದ್ದಿರುವುದನ್ನು ಗಮನಿಸಬಹುದಾಗಿದೆ.

ಇಲ್ಲದಿದ್ದರೆ ಶಿಕ್ಷಣವು ವ್ಯಾಪಾರೀಕರಣ ಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಕೆಲ ಶಿಕ್ಷಣ ಸಂಸ್ಥೆಗಳು ಹಣದಾಸೆಗೆ ಬಿದ್ದು  ಮಕ್ಕಳ ಭವಿಷ್ಯಕ್ಕೆ ಮುಳ್ಳಾಗುವ ಬದಲು, ಸೇವಾ  ಮನೋಭಾವನೆಯಿಂದ ಕಾರ್ಯನಿರ್ವಹಿಸಲಿ ಮತ್ತು ಇಲ್ಲಿನ ನೌಕರರು ಹಾಗೂ ಸಿಬ್ಬಂದಿಗಳು ಸಹ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಲಿ ಎನ್ನುವುದು ಶಿಕ್ಷಣ ಪ್ರೇಮಿಗಳ ಆಶಯವಾಗಿದೆ.                 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button