Important
Trending

ಜನವಸತಿ ಪ್ರದೇಶಕ್ಕೆ ಬಂದ ಬೃಹತ್ ಮೊಸಳೆ: ಆತಂಕಗೊoಡ ಸಾರ್ವಜನಿಕರು

ಕಾರವಾರ: ನದಿಯಿಂದ ನಾಡಿನೆಡೆಗೆ ಬಂದು ಆತಂಕ ಸೃಷ್ಟಿಸಿದ್ದ ಬೃಹತ್ ಮೊಸಳೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಯುವಕರು ಹಿಡಿದು ಮರಳಿ ನದಿಗೆ ಬಿಟ್ಟಿರುವ ಘಟನೆ ದಾಂಡೇಲಿಯ ದೇಶಪಾಂಡೆ ನಗರದ ಕೆಎಸ್‌ಆರ್ ಟಿಸಿ ಡಿಪೋ ಬಳಿ ಇಂದು ನಡೆದಿದೆ. ಬೆಳಂ ಬೆಳಿಗ್ಗೆ ಪಟ್ಟಣದ ಜನವಸತಿ ಪ್ರದೇಶದತ್ತ ಆಗಮಿಸಿದ್ದ ಬೃಹತ್ ಮೊಸಳೆಯನ್ನು ಕಂಡ ಸ್ಥಳೀಯರು ಆತಂಕಗೊoಡಿದ್ದರು.

ತಕ್ಷಣ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು. ಬಳಿಕ ಸ್ಥಳೀಯ ಯುವಕರು ಸೇರಿ ಹಗ್ಗದ ಸಹಾಯದಿಂದ ಮೊಸಳೆಯ ಬಾಯಿ, ದೇಹವನ್ನು ಬಿಗಿದು ಕಟ್ಟಿ ಹಾಕಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ವಾಹನದ ಮೂಲಕ ಪುನಃ ಕಾಳಿ ನದಿಗೆ ಕೊಂಡೊಯ್ದು ಮೊಸಳೆಯನ್ನು ಬಿಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ದಾಂಡೇಲಿ ನಗರದಲ್ಲಿ ಆಗಾಗ ಮೊಸಳೆಗಳು ಪತ್ತೆಯಾಗುತ್ತಿರುವುದು ಸ್ಥಳೀಯರು ತೀವ್ರ ಆತಂಕಗೊoಡಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button