Focus News
Trending

ಅಂಕೋಲೆಯ ಶೈಕ್ಷಣಿಕ ಸಾಧನೆಗೆ ಹೊಸತನದ ‘ಗೌರವ’

IIMBಗೆ ಆಯ್ಕೆಯಾದ ಹವಾಮಾನ ಸಂಶೋದಕ
ಕನ್ನಡದಲ್ಲೇ ಕಲಿತ್ತಿದ್ದ ವಾಸರೆಯ ಕುವರ

[sliders_pack id=”3491″]

ಅಂಕೋಲಾ : ವಿವಿಧ ಕ್ಷೇತ್ರಗಳಲ್ಲಿ ಜನತೆ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ತಾಲೂಕಿನ ಘನತೆ ಹೆಚ್ಚಿಸುತ್ತಲೇ ಬಂದಿದ್ದು, ಇತ್ತಿಚೀನ ದಿನಗಳಲ್ಲಿ ಯುವ ಸಮುದಾಯದವರು ತಮ್ಮ ಶೈಕ್ಷಣಿಕ ಸಾಧನೆಗಳ ಮೂಲಕ ಕೀರ್ತಿ ಪತಾಕೆಯನ್ನು ಎತ್ತಿಹಿಡಿಯುತ್ತಿದ್ದಾರೆ. ಅಂತವರ ಸಾಲಿನಲ್ಲಿ ಹೊಸದಾಗಿ ಸೇರ್ಪಡೆಗೊಂಡು, ಸದ್ದಿಲ್ಲದೇ ಸಾಧನೆ ಮಾಡಿದ ಯುವಕನೋರ್ವ ತಾಲೂಕಿನ ‘ಗೌರವ’ ಹೆಚ್ಚಿಸಿದ್ದಾನೆ.

IIMBಗೆ ಆಯ್ಕೆ: ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೆಜಮೆಂಟ್‌ಗೆ ದೇಶದ ನಾನಾ ಭಾಗದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅಗಸ್ಟ 01 ರಂದು ಸೇರ್ಪಡೆ ಮಾಡಿಕೊಳ್ಳಲಾಗಿದ್ದು, ವಿಜ್ನಾನಿಗಳು ಸೇರಿದಂತೆ ವಿವಿಧ ಕ್ಷೇತ್ರದ ಪರಿಣಿತರೆ ಹೆಚ್ಚಿದ್ದು ಅವರಲ್ಲಿರುವ ಕ್ರಿಯಾತ್ಮಕತೆಯನ್ನು ಪರಿಣಾಮಕಾರಿಯಾಗಿ ಬೆಳೆಸಿ, ಪರಿಪೂರ್ಣವಾಗಿ ವಿನ್ಯಾಸಗೊಳಿಸುವ ಪಿಜಿಪಿ ಶಿಕ್ಷಣ(ಪೋಸ್ಟ ಗ್ರಾಜ್ಯುಯೇಟ್ ಪ್ರೋಗ್ರಾಮ್) ಮತ್ತು 2 ವರ್ಷ ಅವಧಿಯ ಎಂಬಿಎ ಶಿಕ್ಷಣ ನೀಡಲಾಗುತ್ತದೆ. ತಾಲೂಕಿನ ಗೌರವ ಜಿ. ನಾಯಕ ಆಯ್ಕೆಯಾಗುವ ಮೂಲಕ ತಾಲೂಕಿನ ಮತ್ತು ಜಿಲ್ಲೆಯ ಗೌರವ ಹೆಚ್ಚಿದಂತಾಗಿದೆ.


ಶಿಕ್ಷಣ ಮತ್ತು ಸಾಧನೆ : ಲಕ್ಷ್ಮೇಶ್ವರ ನಿವಾಸಿಗಳಾಗಿರುವ, ಮೂಲತಃ ವಾಸರಕುದ್ರಿಗೆ ಗ್ರಾಮದ ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ) ಮತ್ತು ಪಾರ್ವತಿ ನಾಯಕ ಶಿಕ್ಷಕ ದಂಪತಿಗಳ ಪುತ್ರನಾದ ಗೌರವ ನಾಯಕ ತನ್ನ ಪ್ರಾಥಮಿಕ ಶಿಕ್ಷಣವನ್ನು ಅಗಸೂರಿನ ಸರ್ಕಾರಿ ಕನ್ನಡ ಶಾಲೆಯಲ್ಲಿಯೇ ಕಲಿತಿರುವುದು ವಿಶೇಷ. ಪಿ.ಎಮ್ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಕಲಿತು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ್ದನು. ತದ ನಂತರ ಮೈಸೂರು ಯುವರಾಜ ಕಾಲೇಜನಿಂದ ಬಿಎಸ್ಸಿ ಪದವಿ ಮುಗಿಸಿ, ಮೈಸೂರು ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪದವಿ ಪಡೆದಿರುತ್ತಾನೆ.


ವಾಸರಕುದ್ರಿಗೆ ಸ್ವಾತಂತ್ರ್ಯೋತ್ಸವದ ಕೊಡುಗೆ : ಸ್ವಾತಂತ್ರ ಹೋರಾಟದಲ್ಲಿ ತನ್ನನ್ನು ಗುರುತಿಸಿಕೊಂಡು ಕರ್ನಾಟಕದ ಬಾರ್ಡೋಲಿ ಎಂದೇ ಖ್ಯಾತವಾದ ಅಂಕೋಲಾ ತಾಲೂಕಿನ ಹಿರಿಮೆ ಅಪಾರವಾಗಿದೆ. ಹೋರಾಟದ ಮೂಂಚುಣಿಯಲ್ಲಿದ್ದ ಹತ್ತಾರು ಹಳ್ಳಿಗಳಲ್ಲಿ ವಾಸರೆಯು ಒಂದಾಗಿತ್ತು. ಕಳೆದೊಂದು ವರ್ಷದಿಂದೀಚೆಗೆ ಶೈಕ್ಷಣಿಕ ಸಾಧನೆ ತೋರಿದ ಯುವ ಜನಾಂಗದಿoದ ಊರ ಹೆಸರು ಮತ್ತೆ ಮುಂಚೂಣಿಗೆ ಬರುತ್ತಿದೆ. ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿಯಲ್ಲಿ ಮೂವರು ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದು, ಅವರ ಜೊತೆ ನಾಲ್ಕನೇಯವನಾಗಿ ಸೇರಿಕೊಂಡ ಗೌರವ ನಾಯಕನ ಸಾಧನೆ, ಸ್ವಾತಂತ್ರ್ಯ ದಿನದ ಈ ಹೊತ್ತಿನಲ್ಲಿ ಊರಿಗೆ ಸ್ವಾತಂತ್ರ್ಯದ ಸಿಹಿ ಕೊಡುಗೆ ಸಿಕ್ಕಂತಾಗಿದೆ.


ಹವಾಮಾನ ವಿಜ್ಞಾನ ಸಂಶೋದನೆ: ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಓಷನೊಗ್ರಫಿ(ಎನ್‌ಐಒ) ಪಣಜಿಯಲ್ಲಿ 3 ವರ್ಷಗಳ ಕಾಲ ವಿಶೇಷ ಅಧ್ಯಯನ ಮಾಡಿ ಕ್ಯಾಟ್ ಪರೀಕ್ಷೆ ತೇರ್ಗಡೆಯಾಗಿರುತ್ತಾನೆ. ಹೈದ್ರಬಾದಿನಲ್ಲಿರುವ ಇಸ್ರೋದಲ್ಲಿಯೂ ಪ್ರತ್ಯೇಕ ಅಧ್ಯಯನ ನಡೆಸಿರುತ್ತಾನೆ. ಈ ವೇಳೆ ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ಮಳೆಗಾಲದ ಪ್ರಭಾವದ ಕುರಿತು ಹವಾಮಾನ ವಿಜ್ನಾನ ಸಂಶೋದಕರಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆಯ ‘ಗೌರವ’ ಇತನದ್ದಾಗಿದೆ.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button