ಮಾಹಿತಿ
Trending

ಎದ್ದು ನಿಲ್ಲಿರಿ

ಹೊದ್ದು ಮಲಗದೆ ಎಚ್ಚರಾಗಿರಿ
ಎದ್ದು ನಿಲ್ಲಿರಿ ನಿಲ್ಲಿರಿ
ದೇಶ ಪ್ರೇಮದ ಬಿಸಿಯ ನೆತ್ತರು
ಮಾತೆಗರ್ಪಿತವಾಗಲಿ

ಭರತ ಭೂಮಿಯಲ್ಲಿ ಭರತನಂತೆ
ಗರ್ವದಿಂದಲೇ ಗರ್ಜಿಸಿ
ಸೋಲನೆಂದಿಗೂ ಒಪ್ಪಿಕೊಳ್ಳದೆ
ನಮ್ಮ ತನವನು ತೋರಿಸಿ

ಒಳಗು ಹೊರಗಣ ದೇಶದ್ರೋಹಿಯ
ಮರ್ಮವನು ಸದಾ ಅರಿಯಿರಿ
ಕುಟಿಲತನದ ಕಪಟ ಮೋಸಕ್ಕೆ
ಸಿಲುಕದಂತೆ ನೋಡಿರಿ

ಹೇಡಿಯಂತೆ ತಿರುತಿರುಗಿ ಓಡದೆ
ಮುಂದೆ ಮುಂದೆಯೇ ಸಾಗಿರಿ
ಗೆಲುವು ನಮ್ಮನ್ನು ಅಪ್ಪುವರೆಗೆ
ಗುರಿಯನೊಂದೆಯೇ ನೋಡಿರಿ

ಉಮೇಶ ಮುಂಡಳ್ಳಿ ಭಟ್ಕಳ

ಉಮೇಶ ಮುಂಡಳ್ಳಿ ಭಟ್ಕಳ, ಸಾಹಿತಿಗಳು, ಲೇಖಕರು

Related Articles

Back to top button