ಕಾಶ್ಮೀರಿ ಫೈಲ್ ಚಿತ್ರ ವೀಕ್ಷಿಸಿದ ಶಾಸಕಿ : 5 ದಿನಗಳ ಕಾಲ ಉಚಿತ ಪ್ರವೇಶಾವಕಾಶ : ಕಾಶ್ಮೀರಿ ಪಂಡಿತರ ನೈಜ ಜೀವನಾಧಾರಿತ ಕಥಾ ಹಂದರ

ಅಂಕೋಲಾ: ದೇಶದ ಭೂಪಟದಲ್ಲಿ ಕಿರೀಟ ಪ್ರಾಯದಂತಿರುವ ಕಾಶ್ಮೀರ, ನಾನಾ ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ಕಳೆದ 3 ದಶಕಗಳ ಹಿಂದೆ ಕಾಶ್ಮೀರದಲ್ಲಿ ನಡೆದಿತೆನ್ನಲಾದ ನೈಜ ಘಟನೆಗಳ ಆಧರಿತ ಬಹುನಿರೀಕ್ಷಿತ ದಿ ಕಾಶ್ಮೀರಿ ಫೈಲ್ಸ್ ಚಿತ್ರ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ.

ಅಂಕೋಲಾದ ಪಟ್ಟಣದ ಸಮರ್ಥ ಟಾಕೀಸಿನಲ್ಲಿ ಸೋಮವಾರ ಬೆಳಗಿನ ಮೊದಲ ಷೋದಲ್ಲಿ ಕಾಶ್ಮೀರಿ ಫೈಲ್ ಚಿತ್ರದ ವೀಕ್ಷಣೆಗೆ ವಿಶೇಷ ಅವಕಾಶ ಕಲ್ಪಿಸಲಾಗಿತ್ತು. ಶಾಸಕಿ ರೂಪಾಲಿ ನಾಯ್ಕ ಸಿನೇಮಾ ಥಿಯೇಟರ್ ಗೆ ಬಂದು, ಕೆಳಮಹಡಿಯಲ್ಲಿರುವ ಪ್ರೇಕ್ಷಕ ಗ್ಯಾಲರಿ, ಹಾಗೂ ಬಾಲ್ಕನಿಗೆ ತೆರಳಿ ,ಸಿನಿಮಾ ನೋಡಲು ಕಾತುರದಿಂದ ಬಂದಿದ್ದ ಪ್ರೇಕ್ಷಕರನ್ನು ಆತ್ಮೀಯತೆಯಿಂದ ಮಾತನಾಡಿಸಿದರು.

ತಾವು ಸಹ ಪೂರ್ತಿ ಚಿತ್ರ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು. ಬಹುಶಃ ಅಂಕೋಲಾದಲ್ಲಿ ಶಾಸಕರೊಬ್ಬರು ಪ್ರೇಕ್ಷಕರ ಜೊತೆ ಸಿನೇಮಾ ವೀಕ್ಷಣೆ ಮಾಡಿದ್ದು ಇದೇ ಮೊದಲ ಬಾರಿಯಾಗಿದೆ ಎಂಬ ಮಾತುಗಳು ಕೇಳಿಬಂದಿದೆ.

ವಿವೇಕ ಅಗ್ನಿಹೋತ್ರಿ ನಿರ್ದೇಶನದ ಚಿತ್ರದಲ್ಲಿ ಮಿಥುನ ಚಕ್ರವರ್ಥಿ, ಅನುಪಮ ಖೇರ, ಕನ್ನಡದ ಪ್ರಕಾಶ ಬೆಳವಾಡಿ, ಪುನೀತ ಇಸ್ಸಾರ ಮುಂತಾದವರು ನಟಿಸಿದ್ದು ಕಾಶ್ಮೀರದಲ್ಲಿ 3 ದಶಕಗಳ ಹಿಂದೆ ನಡೆದ ಕಾಶ್ಮೀರಿ ಪಂಡಿತರ ಜನ ಜೀವನದ ಮೇಲೆ ನಡೆದ ದಬ್ಬಾಳಿಕೆ, ಕ್ರೌರ್ಯ, ಅಟ್ಟಹಾಸ ಮತ್ತಿತರ ಅಮಾನವೀಯ ಘಟನಾವಳಿಗಳ ಮೇಲೆ ಚಿತ್ರ ಬೆಳಕು ಚೆಲ್ಲಿದೆ ಎಂಬ ಅಭಿಪ್ರಾಯ ಪ್ರೇಕ್ಷಕ ವರ್ಗದಿಂದ ಕೇಳಿಬಂದಿದೆ..

ಶಾಸಕಿ ರೂಪಾಲಿ ನಾಯ್ಕ ಕಾರವಾರದ ನಂತರ ತನ್ನ ಕ್ಷೇತ್ರ ವ್ಯಾಪ್ತಿಯ ಅಂಕೋಲೆಯ ಜನತೆಗೂ ದಿ 21 ರಿಂದ ಸತತ 5 ದಿನ, ಬೆಳಗಿನ ಪ್ರಥಮ ಷೋ ಉಚಿತವಾಗಿ ವೀಕ್ಷಿಸಲು ಅನುವು ಮಾಡಿ ಕೊಟ್ಟಿರುವದಕ್ಕೆ ತಾಲೂಕಿನ ಬಹುತೇಕ ಸಿನಿ ಪ್ರಿಯರು ಹರ್ಷ ವ್ಯಕ್ತಪಡಿಸಿದ್ದಾರೆ. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಚಿತ್ರ ವೀಕ್ಷಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Exit mobile version