ಭಟ್ಕಳ: ಮೊಗೇರ ಸಮಾಜದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ವ್ಯಕ್ತಿಯಿಬ್ಬರ್ವ ಶಂಸುದ್ದೀನ್ ಸರ್ಕಲ್ ಏರಿ ವಿಷ ಸೇವಿಸಲು ಯತ್ನಿಸಿದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮಾಜದವರಿಗೆ ನೀಡುತ್ತಿರುವ ಪ್ರವರ್ಗ 1ರ ಪ್ರಮಾಣ ಪತ್ರ ಸ್ಥಗಿತಗೊಳಿಸಿ, ಈ ಹಿಂದಿನoತೆ ಸರ್ಕಾರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಭಟ್ಕಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಮಿನಿವಿಧಾನಸೌಧದ ಎದುರು ಅನಿರ್ದಿಷ್ಟಾವಧಿಯ ವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ©Copyright reserved by Vismaya tv
ಈ ಹಿನ್ನೆಲೆ ವೆಂಕಟಾಪುರದಿoದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆ ಭಟ್ಕಳ ಶಂಸುದ್ದೀನ್ ಸರ್ಕಲ್ ತಲುಪುತ್ತಿದ್ದಂತೆ ತಾಲೂಕಿನ ಗಾಂಧಿ ನಗರದ ನಿವಾಸಿ ಉಮೇಶ ಮೊಗೇರ ಎಂಬಾತ ಶಂಸುದ್ದಿನ್ ಸರ್ಕಲ್ ಏರಿ ವಿಷ ಸೇವಿಸಲು ಯತ್ನಿಸಿದ್ದಾನೆ. ನಂತರ ಇಬ್ಬರು ಯುವಕರು ಸರ್ಕಲ್ ಏರಿ ಆತನ ಕೈಯಲ್ಲಿದ್ದ ವಿಷದ ಬಾಟಲ್ ಕಸಿದುಕೊಂಡರು. ನಂತರ ಪೊಲೀಸ ಇಲಾಖೆ ಹಾಗೂ ಸಮಾಜದ ಮುಖಂಡರು ಆತನ ಮನವೊಲಿಸಿ ಉಮೇಶ ಮೊಗೇರನ್ನು ಶಂಸುದ್ದಿನ್ ಸರ್ಕಲ್ ನಿಂದ ಕೆಳಗೆ ಇಳಿಸಲಾಯಿತು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.