ವಾಸಸ್ಥಳಕ್ಕೆ ಜಾಗದ ಇತ್ಯರ್ಥ ಆಗುವ ವರೆಗೂ ಐಆರ್‌ಬಿ ಕಾಮಗಾರಿ ಮಾಡಲು ಅವಕಾಶ ಕೊಡುವುದಿಲ್ಲ : ತಂಡ್ರಕುಳಿ ಗ್ರಾಮಸ್ಥರು

ಕುಮಟಾ: ತಾಲೂಕಿನ ದೀವಗಿ ಗ್ರಾಮದ ತಂಡ್ರಕುಳಿಯಲ್ಲಿ ಪರ್ಯಾಯ ವಾಸಸ್ಥಳಕ್ಕೆ ಜಾಗದ ಇತ್ಯರ್ಥ ಆಗುವ ವರೆಗೂ ಐಆರ್‌ಬಿ ಕಾಮಗಾರಿ ಮಾಡಲು ಅವಕಾಶ ಕೊಡುವುದಿಲ್ಲ ಎಂದು ತಂಡ್ರಕುಳಿ ಗ್ರಾಮಸ್ಥರು ಹೇಳಿದರು.ಪೋಲೀಸ್ ರಕ್ಷಣೆಯೊಂದಿಗೆ ಕಾಮಗಾರಿ ಮಾಡಲು ಬಂದ ಐಆರ್‌ಬಿಯವರಿಗೆ ಕಾಮಗಾರಿ ಮಾಡಲು ಬಂದಾಗ ಗ್ರಾಮಸ್ಥರು ತಡೆದ ಘಟನೆಯೂ ನಡೆದಿದೆ.

ತಂಡ್ರಕುಳಿ ಗುಡ್ಡ ಕುಸಿದು ಇವತ್ತಿಗೆ 5 ವರ್ಷ ಕಳೆಯುತ್ತಿದ್ದರೂ ಈ ವರೆಗೂ ತಂಡ್ರಕುಳಿಯ ಗ್ರಾಮಸ್ಥರ ಬೇಡಿಕೆ ಈಡೇರಿರುವುದಿಲ್ಲ. ಬಹಳ ಮುಖ್ಯವಾಗಿ ಅವೈಜ್ಞಾನಿಕವಾಗಿ ರಸ್ತೆಗೆ ಅಡ್ಡ ಬಂದಿರುವ ಕಲ್ಲನ್ನು ಒಡೆಯಲು ಮೂರಿ ಬಾರಿ ಬಾಂಬ್ ಬ್ಲಾಸ್ಟ್ ಮಾಡಿರುವುದರಿಂದ ಪ್ರತಿ ಸಲ ಕಲ್ಲು ರಸ್ತೆಯ ತಗ್ಗಿನಲ್ಲಿ ವಾಸವಾಗಿರುವ ಗ್ರಾಮಸ್ಥರ ಮನೆಯ ಮೇಲೆ ಬಿದ್ದು ಮನೆಗಳು ಸೀಳು ಬಿಟ್ಟಿದ್ದಲ್ಲದೇ ಸ್ಲೇಬ್‌ನ ಕಂಬಗಳು ಜಖಂಗೊoಡಿದ್ದಲ್ಲದೇ ಹೆಂಚುಗಳು ಉದುರಿಬಿದ್ದು ಏನೆಲ್ಲ ಅನಾಹುತ ಆಗಿದೆ ಎಂದು ಆ ಸಂದರ್ಭದಲ್ಲಿ ವೀಕ್ಷಣೆಗೆ ಆಗಮಿಸಿದ್ದ ಎಸಿ, ತಹಶೀಲ್ದಾದರರು ಖುದ್ದಾಗಿ ಕಂಡಿರುತ್ತಾರೆ ಎಂದು ತಂಡ್ರಕುಳಿ ಗ್ರಾಮಸ್ಥರ ಪರವಾಗಿ ಸಾಮಾಜಿಕ ಕಾರ್ಯಕರ್ತ ಆರ್.ಕೆ.ಅಂಬಿಗ ಹೇಳಿದರು.

ಇಂದು ಪುನಃ ಪೋಲೀಸ್ ರಕ್ಷಣೆಯೊಂದಿಗೆ ಕಾಮಗಾರಿ ಮಾಡಲು ಬಂದ ಐಆರ್‌ಬಿಯವರಿಗೆ ಕಾಮಗಾರಿ ಮಾಡಲು ಬಂದಾಗ ಗ್ರಾಮಸ್ಥರು ತಡೆದರು. ನಂತರ ಆಗಮಿಸಿದ ಪಿಎಸ್‌ಐ ನವೀನ್ ನಾಯ್ಕ ಹಾಗೂ ರವಿಗುಡೆಯವರು ಚರ್ಚೆ ಮಾಡಿ ಎಸಿಯವರ ಜೊತೆ ಸಭೆ ಮಾಡಲು ವ್ಯವಸ್ಥೆಗೊಳಿಸಿದರು.

ಪರಿಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ಅವಲೋಕನ ಮಾಡಿದ ಮಾನ್ಯ ಎಸಿಯವರು ಈ ವಾರದಲ್ಲಿ ಡಿಸಿಯವರ ಜೊತೆ ಈ ವಿಷಯದ ಕುರಿತು ಚರ್ಚೆ ಮಾಡುತ್ತೇನೆ. ಮತ್ತು ಕರ್ನಾಟಕ ಸರಕಾರಿ ಜಾಗ ಇಲ್ಲವೇ ಇನ್ಯಾವುದೇ ಪರ್ಯಾಯ ಜಾಗದ ವ್ಯವಸ್ಥೆಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿ ಡಿಸಿ ಯವರ ಜೊತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ವರೆಗೂ ಐಆರ್‌ಬಿ ಕಾಮಗಾರಿ ಮಾಡದಂತೆ ಸಂಬoಧಪಟ್ಟವರಿಗೆ ತಿಳಿಸಿದರು. ತಂಡ್ರಕುಳಿ ಗ್ರಾಮಸ್ಥರ ಪರವಾಗಿ ಸಾಮಾಜಿಕ ಕಾರ್ಯಕರ್ತ ಆರ್.ಕೆ.ಅಂಬಿಗ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಗಣಪಯ್ಯ ಅಂಬಿಗ, ರಾಮ ಅಂಬಿಗ, ರಮೇಶ ಅಂಬಿಗ, ಈಶ್ವರ ಅಂಬಿಗ, ಮಂಜುನಾಥ ಅಂಬಿಗ, ರಾಜೀವ ಅಂಬಿಗ, ಸತೀಶ ಅಂಬಿಗ ಹಾಗೂ ಮಹಿಳೆಯರು, ಯುವಕರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಕುಮಟಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version